ವಚನ ದರ್ಶನ ಪುಸ್ತಕದ ವಿರುದ್ಧ ಯಾವ ರೀತಿಯ ಹೋರಾಟದ ಅವಶ್ಯಕತೆ ಇದೆ ??
ಲಿಂಗಾಯತವು ಹಿಂದೂ ವೈದಿಕ ಧರ್ಮದ ಭಾಗ ಎಂದು ತಪ್ಪಾಗಿ ಅರ್ಥೈಸಿದ್ದ "ವಚನ ದರ್ಶನ" ಪುಸ್ತಕಕ್ಕೆ ಉತ್ತರವಾಗಿ "ವಚನದರ್ಶನ ಮಿಥ್ಯ vs ಸತ್ಯ" ಎಂಬ ಗ್ರಂಥ ಬಿಡುಗಡೆ ಸಮಾರಂಭ ಬೆಂಗಳೂರಲ್ಲಿ ಬಸವಪರ ಸಂಘಟನೆಗಳು ಮತ್ತು ಬಸವ ತತ್ವ ಮಠಾಧೀಶರ ವತಿಯಿಂದ ನಡೆಯಿತು.
ಜಾಗತಿಕ ಲಿಂಗಾಯತ ಮಹಾಸಭಾದವರಾಗಲಿ ಅಥವಾ ಬೇರೆ ಮಠಾಧೀಶರಾಗಲಿ, ಅವರ ಹಿಂದೆ ಬಸವ ಭಕ್ತರು ಇರಬಹುದು ಆದರೆ ಯಾವುದೇ ತತ್ವ ನಿಷ್ಠರ ಪಡೆಯಿಲ್ಲ. ಅದಕ್ಕಾಗಿ ಪ್ರತಿಭಟನೆ, ಸತ್ಯಾಗ್ರಹ, ಹೋರಾಟ ಮಾಡುವ ಶಕ್ತಿ, ಸಾಮರ್ಥ್ಯ ಅವರ ಹತ್ತಿರ ಇಲ್ಲ. ಅದಕ್ಕಾಗಿ ಅವರು ವಚನದರ್ಶನ ಪುಸ್ತಕಕ್ಕೆ ಇನ್ನೊಂದು ಪುಸ್ತಕದ ಮೂಲಕ ಮಾತ್ರ ಉತ್ತರ ಕೊಡಬಲ್ಲರು.
ಆದರೆ ಪೂಜ್ಯ ಗಂಗಾ ಮಾತಾಜಿಯವರ ಹತ್ತಿರ ತಮ್ಮ ಗುರುಗಳಾದ ಪೂಜ್ಯ ಮಾತೆಮಹಾದೇವಿಯವರು ಬಿಟ್ಟು ಹೋಗಿರುವ ರಾಷ್ಟ್ರೀಯ ಬಸವದಳ ಎಂಬ ತತ್ವ ನಿಷ್ಠ ಶರಣರ ಪಡೆ ಇದೆ. ಇಂತಹ ಸೈನ್ಯವನ್ನು ಇಟ್ಟುಕೊಂಡು ಸಹ ಗಂಗಾ ಮಾತಾಜಿಯವರು ರಸ್ತೆಗೆ ಇಳಿದು ಪ್ರತಿಭಟನೆ ಮಾಡಿ ಗಣಾಚಾರವನ್ನು ಪ್ರದರ್ಶಿಸುವ ಬದಲು ಕೇವಲ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೋಗಿ ಪುಸ್ತಕ ಹಿಡಿದುಕೊಂಡು ನಿಂತಿರುವುದನ್ನು ನೋಡಿದರೆ ಅವರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ.
ರಾಷ್ಟ್ರೀಯ ಬಸವದಳ ಸಂಘಟನೆ ಹಾಗೂ ಬಸವ ಧರ್ಮಪೀಠ ಒಡೆದಾಗ ಇದನ್ನು ಉಳಿಸಿಕೊಳ್ಳುವ ಅಥವಾ ಒಂದುಗೂಡಿಸುವ ಪ್ರಯತ್ನವನ್ನು ಲಿಂಗಾಯತ ಸಂಘಟನೆಗಳ ಮುಖಂಡರಾಗಲಿ, ಮಠಾಧೀಶರಾಗಲಿ ಮಾಡಲಿಲ್ಲ.
ವಚನದರ್ಶನ ಪುಸ್ತಕದವರು ಮಾಡಿದ ಅಪಪ್ರಚಾರದ ಮುಂದೆ ಈ ರೀತಿ ಗ್ರಂಥ ಬಿಡುಗಡೆ ಮೂಲಕ ಉತ್ತರ ಕೊಡುವ ಪ್ರಯತ್ನವು ಚಿಕ್ಕದಾಗಿ ಕಾಣಿಸುತ್ತೆ. ಏಕೆಂದರೆ ವಚನದರ್ಶನ ಪುಸ್ತಕ ಬಿಡುಗಡೆ ಹಿಂದೆ ಲಿಂಗಾಯತ ಧರ್ಮ ಮಾನ್ಯತೆಗೆ ವಿರೋಧ ಮಾಡಿದ್ದ ಒಂದು ಬಲಪಂಥೀಯ ದೊಡ್ಡ ಸಂಘಟನೆ ಹಿಂದೆ ನಿಂತು ಕೆಲಸ ಮಾಡಿತು. ಕರ್ನಾಟಕದ ಒಂದು ದೊಡ್ಡ ನ್ಯೂಸ್ ಚಾನೆಲ್ ಕೂಡ ಇದಕ್ಕೆ ಕೈ ಜೋಡಿಸಿತು. ಆದರೂ ಕೂಡ ಬಸವಪರ ಸಂಘಟನೆಗಳು ಒಂದಾಗಿ ಗ್ರಂಥ ಬಿಡುಗಡೆಯ ಮೂಲಕ ಉತ್ತರ ಕೊಟ್ಟಿರುವ ಪ್ರಯತ್ನವನ್ನು ನಾವು ಬೆಂಬಲಿಸೋಣ.
ಸಭೆ ಮಾಡುವುದು, ಪತ್ರಿಕಾಗೋಷ್ಠಿ ಮಾಡುವುದು, ಪುಸ್ತಕ ಬಿಡುಗಡೆ ಸಮಾರಂಭ ಮಾಡುವುದು ಇವೆಲ್ಲವೂ ಕೂಡ ಬೇಕು. ಆದರೆ ಇವೆಲ್ಲವುದಕ್ಕಿಂತ ಹೆಚ್ಚಿನ ಪರಿಣಾಮಕಾರಿ ಅಂದ್ರೆ ಪ್ರತಿಭಟನೆ ಮಾಡುವುದು, ರ್ಯಾಲಿ ಮಾಡುವುದು, ಸತ್ಯಾಗ್ರಹ ಮಾಡುವುದು, ಧರಣಿ ಕೂಡುವುದು, ಈ ರೀತಿ ಹೋರಾಟ ಮಾಡುವ ಅವಶ್ಯಕತೆ ಕೂಡ ಇದೆ.
- ಶರಣು ಶರಣಾರ್ಥಿ~
ಸಿದ್ಧವೀರ ಸಂಗಮದ



ಆದರೆ ಇವರು ನಿರೂಪಣೆಗೆ ಕರೆದಿದ್ದ ವ್ಯಕ್ತಿ ಬ್ರಾಹ್ಮಣರೆ ಅಲ್ಲವೇ, ಲಿಂಗಾಯತರಲ್ಲಿ ಯಾರು ಇರಲಿಲ್ಲವೇ ಎಂಬಪ್ರಶ್ನೆ ನನ್ನ ಕಾಡುತ್ತೆ
ಪ್ರತ್ಯುತ್ತರಅಳಿಸಿನಿಮ್ಮ ಎದೆಯಮೆಲೆ ಲಿಂಗವಿಲ್ಲದಿದ್ದರೆ ಮಾತ್ರ ಇವರ ವೆದಿಕೆಯ ಮೆಲೆ ಅನುಮತಿ, ಲಿಂಗವಿದ್ದವರಿಗೆ ಅನುಮತಿ ಇಲ್ಲಾ (ಕಾವಿ ಧಾರಿಗಳನ್ನು ಹೊರೆತು ಪಡಿಸಿ
ಪ್ರತ್ಯುತ್ತರಅಳಿಸಿಗಂಗಾದೇವಿ ಅವರ ಕೈಗೊಂಬೆ ಆಗಿದ್ದಾರೆ, ಇನ್ನು ಹೋರಾಟ ಎಲ್ಲಿಂದ ಬಂತು? ಬಸವ ಸಮಿತಿ ಹಾಗೂ ರಾಷ್ಟ್ರೀಯ ಬಸವದಳದ ಹೆಸರುಗಳನ್ನು ಕೊನೆಗೆ ಹಾಕಿದ್ದಾರೆ ಇದಾವೋ ಇಲ್ಲವೋ ಅನ್ನೊ ಹಾಗೆ.ಜಾಲಿಮ ಮೊದಲು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ