ಪೂಜ್ಯ ಮಾತೆ ಮಹಾದೇವಿಯವರ ಕೊಲೆ ಮಾಡಲು ದೊಡ್ಡ ಸಂಚು ಮಾಡಲಾಗಿತ್ತು ??
(Mate Mahadevi - a progressive female Mystic in India" ಎಂಬ ಆರ್ಟಿಕಲ್ ನಿಂದ ಆಯ್ದ ಭಾಗವನ್ನು ಕನ್ನಡ ಭಾಷೆಯಲ್ಲಿ ಅನುವಾದ ಮಾಡಲಾಗಿದೆ)
ವಿದೇಶದ ವಿಶ್ವವಿದ್ಯಾಲಯದ ಮಹಿಳೆ ಭಾರತಕ್ಕೆ ಬಂದು ಪೂಜ್ಯ ಮಾತಾಜಿಯವರ ಸಂದರ್ಶನವನ್ನು (interview) ಪಡೆದು, ಅವರ ಜೀವನದ ಬಗ್ಗೆ ಬರೆದು ಇಂಟರ್ನ್ಯಾಷನಲ್ ಜರ್ನಲ್ ನಲ್ಲಿ ಪ್ರಕಟಿಸಿದ್ದಾರೆ.
~ : --- : ~
ಮಾತೆಮಹಾದೇವಿಯವರಿಗೆ ಸಂಬಂಧಿಸಿದ ಇನ್ನೊಂದು ಗಂಭೀರ ಘಟನೆ ಯೊಂದು 1997 ರಲ್ಲಿ ಸಂಭವಿಸಿತು. ಅವರು ಬಹುತೇಕ ತನ್ನ ಜೀವವನ್ನು ಕಳೆದುಕೊಳ್ಳುವಂತಹ ಸಂದರ್ಭ ಆವಾಗ ಬಂದಿತ್ತು.
19 ಆಗಸ್ಟ್ 1996 ರಂದು ಅವರ ಒಂದು ಪುಸ್ತಕ ಪ್ರಕಟಿಸಲಾಯಿತು. ಮಾತೆ ಮಹಾದೇವಿಯವರು ಅದರಲ್ಲಿ ದೇವರನ್ನು ಉಲ್ಲೇಖಿಸುವಾಗ ಕೂಡಲಸಂಗಮದೇವ ಮತ್ತು ಲಿಂಗದೇವ ಎಂದು ಎರಡು ಹೆಸರುಗಳನ್ನು ಬಳಸಿದ್ದರು. ಬಸವಣ್ಣನವರ ವಚನಗಳ ಆಳವಾದ ಅಧ್ಯಯನದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಬಸವಣ್ಣನವರು ಜ್ಞಾನೋದಯವಾಗುವ ಮೊದಲು ಕೂಡಲಸಂಗಮದೇವ ಪದವನ್ನು ಆನಂತರ ಲಿಂಗದೇವ ಪದವನ್ನು ಅಂಕಿತನಾಮವಾಗಿ ಬಳಸಿದ್ದರು ಎಂಬುದು ಅವರ ವಾದವಾಗಿತ್ತು.
ಇತರ ಸಮುದಾಯಗಳ ಲಿಂಗಾಯತ ಸ್ವಾಮಿಗಳು ಇದರಿಂದ ಕೋಪಗೊಂಡಿದ್ದರು ಮತ್ತು ಅವರಲ್ಲಿ ಕೆಲವರು ಮಾತೆಮಹಾದೇವಿಯವರ ಹಾಗೂ ಅವರ ಅನುಯಾಯಿಗಳ ಹತ್ಯೆಗೆ ಸಂಚು ರೂಪಿಸಿದರು. ಕೊಲೆ ನಡೆಯಬೇಕಾದ ಸ್ಥಳ ಮತ್ತು ಸಮಯ ನಿರ್ಧರಿಸಲಾಗಿತ್ತು. ವಾರ್ಷಿಕ ಶರಣ ಮೇಳ ಕಾರ್ಯಕ್ರಮದಲ್ಲಿ ಈ ಸಂಚು ನಡೆಯಬೇಕಿತ್ತು. ಅಲ್ಲಿ ಭಾರತದಾದ್ಯಂತ ಜನರು ಒಟ್ಟುಗೂಡುತ್ತಾರೆ.
12 ಜನವರಿ 1997 ರಂದು, ಒಟ್ಟು 17 ಜನರು ಕೂಡಲಸಂಗಮಕ್ಕೆ ವಾಹನದಲ್ಲಿ ಬರುತ್ತಿದ್ದಾಗ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಪೊಲೀಸರಿಂದ ಬಂಧಿಸಲಾಯಿತು. ಈ ಯೋಜಿತ ದಾಳಿಯ ಬಗ್ಗೆ ಪೊಲೀಸರಿಗೆ ಮೊದಲೇ ಸುಳಿವು ಸಿಕ್ಕಿತ್ತು.
ಈ ದುಷ್ಕರ್ಮಿಗಳ ಇನ್ನೊಂದು ಗುಂಪು ಶರಣ ಮೇಳ ಕಾರ್ಯಕ್ರಮದಲ್ಲಿ ಸೇರಿಕೊಂಡಿತ್ತು. ಈ ಗುಂಪಿನವರು ಶರಣ ಮೇಳದಲ್ಲಿ ಬಡಿಸುತಿದ್ದ ಊಟ ಮತ್ತು ಕುಡಿಯುವ ನೀರಿನಲ್ಲಿ ವಿಷವನ್ನು ಬೇರಿಸಲಿಕ್ಕೆ ಲಂಚ ಪಡೆದಿದ್ದರು. ಜನರು ಅನುಮಾನ ಪಟ್ಟಿದ್ದರಿಂದ ಇವರನ್ನು ಕೂಡ ಪೊಲೀಸರು ಬಂಧಿಸಿದರು.
ಈ ದುಷ್ಕರ್ಮಿಗಳ ಅಂತಿಮ ಗುಂಪಿಗೆ ಶರಣ ಮೇಳದಲ್ಲಿ ಸಭಾಭವನದ ಬ್ರಹತ್ ಟೆಂಟ್ ಅನ್ನು ಸುಡುವ ಕೆಲಸವನ್ನು ನೀಡಲಾಗಿತ್ತು. ದಾಳಿಕೋರರು ಅಪರಾಧವನ್ನು ನಡೆಸಲು ಎರಡು ಕಾರುಗಳಲ್ಲಿ ಚಾಲನೆ ಮಾಡುತ್ತಿದ್ದರು. ಒಂದು ಕಾರು ಕ್ರಾಸ್‌ರೋಡ್ ಹತ್ತಿರ ಸಾರಿಗೆ ಬಸ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಏಳು ಪುರುಷರಲ್ಲಿ ಆರು ಜನರು ತಕ್ಷಣವೇ ಸಾವನ್ನಪ್ಪಿದರು ಮತ್ತು ಏಳನೆಯವನು ತೀವ್ರವಾಗಿ ಗಾಯಗೊಂಡನು. ಆದರೆ ಇನ್ನೊಂದು ಕಾರಿನವರು ಪರಾರಿಯಾದರು. ಅಪಘಾತದ ಸಂದರ್ಭಗಳ ಬಗ್ಗೆ ಮೌನವಾಗಿರುವಂತೆ ಮಾಡಲು ಸಂತ್ರಸ್ತರ ಸಂಬಂಧಿಕರಿಗೆ ಸ್ವಾಮಿಗಳಿಂದ ದೊಡ್ಡ ಮೊತ್ತದ ಹಣ ನೀಡಲಾಯಿತು.
ಈ ಕೃತ್ಯವನ್ನು ಮಾಡಿದ ಆ ಸ್ವಾಮಿಗಳನ್ನು ಬಂಧಿಸಲಾಗಿದೆಯೇ? ಎಂದು ನಾನು ಕೇಳಿದಾಗ, ಮಾತೆಮಹಾದೇವಿ ಅವರು ಈ ರೀತಿ ನನಗೆ ಉತ್ತರಿಸಿದರು. "ಭಾರತದಲ್ಲಿ ಇದು ಎಂದಿಗೂ ಸಂಭವಿಸುವುದಿಲ್ಲ; ಈ ಸ್ವಾಮಿಗಳು ಶ್ರೀಮಂತರಾಗಿದ್ದಾರೆ ಮತ್ತು ರಾಜಕೀಯವಾಗಿ ತುಂಬಾ ಪ್ರಬಲರಾಗಿದ್ದಾರೆ. ಅವರು ಸಮಾಜದಲ್ಲಿ ಯಾವುದೇ ಔಪಚಾರಿಕ ರಾಜಕೀಯ ಸ್ಥಾನವನ್ನು ಹೊಂದಿರದಿದ್ದರೂ ಕೂಡ ಅವರು ಪೋಲೀಸ್ ವ್ಯವಸ್ಥೆಯನ್ನು ಭ್ರಷ್ಟಗೊಳಿಸಲು ಸಮರ್ಥರಾಗಿದ್ದಾರೆ, ಹೀಗಾಗಿ ಅದರ ಲಾಭವನ್ನು ಪಡೆದುಕೊಳ್ಳುತ್ತಾರೆ."
(ಪೂರ್ತಿ ಆರ್ಟಿಕಲ್ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ)
https://www.researchgate.net/publication/297816618_Mate_Mahadevi_a_Progressive_Female_Mystic_in_Today's_India



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ