ಬ.ಧ.ಪೀಠದ ವತಿಯಿಂದ "ವೀರಶೈವ" ಪದ ಹೊಂದಿರುವ ಸಂಘಟನೆಗೆ ಪ್ರಶಸ್ತಿ? Tell me who your friends are, and I will tell you who you are

ಬಸವಧರ್ಮ ಪೀಠದ ವತಿಯಿಂದ ಬೆಂಗಳೂರಿನ ಕುಂಬಳಗೋಡಿನಲ್ಲಿ ನಡೆಯಲಿರುವ ಪೂಜ್ಯ ಮಾತಾಜಿ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ *"ವೀರಶೈವ ಲಿಂಗಾಯತ ಬಂಧು ಬಳಗ"* ಎಂಬ ಹೆಸರಿನ ಸಂಘಟನೆಗೆ *"ಶರಣ ಸಂಘಟನಾ ರತ್ನ"* ಎಂಬ *ಪ್ರಶಸ್ತಿ ಪ್ರದಾನ* ಮಾಡಲಾಗುತ್ತಿದೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.



ಆ ಒಂದು ಸಂಘಟನೆ ಮಾಡಿರುವ ಯಾವುದೋ ಒಳ್ಳೆಯ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡುತ್ತಿರಬಹುದು. ಆದರೆ ತನ್ನ ಹೆಸರಿನಲ್ಲಿ *"ವೀರಶೈವ"* ಪದವನ್ನು ಹೊಂದಿರುವ ಸಂಘಟನೆಗೆ ಪ್ರಶಸ್ತಿ ಕೊಡುವುದರಿಂದ ಲಿಂಗಾಯತ ಸಮಾಜಕ್ಕೆ ಯಾವ *ಸಂದೇಶ* ಹೋಗುತ್ತದೆ ಎಂಬುದನ್ನು ವಿಚಾರ ಮಾಡಬೇಕು. 

ಲಿಂಗಾಯತ ಧರ್ಮಕ್ಕೇ ಇಲ್ಲಿಯ ತನಕ ಯಾವುದಾದರೂ ಒಂದು ಪದ ಬಹುದೊಡ್ಡ *ನಷ್ಟವನ್ನು* ಉಂಟು ಮಾಡಿದೆ ಅಂದರೆ ಅದು "ವೀರಶೈವ" ಪದ. 

ಲಿಂಗಾಯತ ಧರ್ಮ ಸಂವಿಧಾನಿಕ ಮಾನ್ಯತೆಗೆ ದೊಡ್ಡ *ತೊಡಕು* ಆಗಿರುವ ಯಾವುದಾದರೂ ಪದ ಇದ್ದರೆ ಅದು "ವೀರಶೈವ" ಪದ. 

ಪರಮಪೂಜ್ಯ ಮಾತೆ ಮಹಾದೇವಿಯವರು ತಮ್ಮ ಜೀವನವಿಡಿ ವೀರಶೈವ ಪದವನ್ನು ವಿರೋಧಿಸಿದಷ್ಟು ದಿಟ್ಟತನವನ್ನು ಬೇರೆ ಯಾವ ಸ್ವಾಮಿಗಳು ತೋರಲಿಲ್ಲ. ಅದಕ್ಕಾಗಿ ಅವರು ಸಾಕಷ್ಟು *ಟೀಕೆ, ನಿಂದನೆ, ತೇಜೋವಧೆ* ಗಳನ್ನು ಎದುರಿಸಬೇಕಾಯಿತು. ಆದರೂ ಕೂಡ ಎಲ್ಲವನ್ನು ಸಹಿಸಿ, ಹೋರಾಡಿ *"ಲಿಂಗಾಯತರು ವೀರಶೈವರಲ್ಲ, ಲಿಂಗಾಯತವು ಒಂದು ಸ್ವತಂತ್ರ ಧರ್ಮ"* ಎಂಬ ಜಾಗೃತಿಯನ್ನು ಉಂಟು ಮಾಡಲು ಮೂಲ ಕಾರಣರಾದರು.

ಈ ರೀತಿ ಪೂಜ್ಯ ಮಾತಾಜಿ ಅವರು ಲಿಂಗಾಯತ ಪದವನ್ನು ವೀರಶೈವ ಪದದಿಂದ ಮುಕ್ತಗೊಳಿಸಿ *ಶುದ್ಧೀಕರಣಗೊಳಿಸಿ* ಹೋಗಿರುವಾಗ, ಬಸವಧರ್ಮ ಪೀಠದವರು ಮತ್ತೆ ಈ ರೀತಿ ಈ ಪದಕ್ಕೆ ಆಸ್ಪದವನ್ನು , ಪ್ರೋತ್ಸಾಹವನ್ನ (space) ಕೊಟ್ಟರೆ ಲಿಂಗಾಯತರ ತಲೆಗಳನ್ನು ಮತ್ತೆ *ಕಲುಷಿತಗೊಳಿಸಲು*, ಸಂದೇಹಗಳಿಗೆ ತುತ್ತಾಗಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ. 

ಹಾಗೂ ಮಾತಾಜಿಯವರು ಪಟ್ಟಂತಹ *ಪರಿಶ್ರಮವನ್ನು* ಹಾಳು ಮಾಡಿದಂತೆ ಆಗುತ್ತದೆ. ಈಗಿನ ಪೀಠಾಧ್ಯಕ್ಷರು ಈ ಸೂಕ್ಷ್ಮತೆಯನ್ನು ಮನವರಿಕೆ ಮಾಡಿಕೊಳ್ಳಬೇಕು.

ಒಂದು ವೇಳೆ ಬ.ಧ.ಪೀಠ ದವರಿಗೆ ಅದೇ ಒಂದು ಸಂಘಟನೆಗೆ ಪ್ರಶಸ್ತಿ ಕೊಡಬೇಕೆಂದು ಇಚ್ಛೆ ಇದ್ದರೆ ಆ ಒಂದು ಸಂಘಟನೆಗೆ ತಮ್ಮ ಹೆಸರಿನಿಂದ ವೀರಶೈವ ಪದವನ್ನು ತೆಗೆದು *"ಲಿಂಗಾಯತ ಬಂಧು ಬಳಗ"* ಎಂದು ಮರು ನಾಮಕರಣ ಮಾಡಿಕೊಳ್ಳುವಂತೆ ಮಾಡಬೇಕಿತ್ತು. ನಂತರ ಪ್ರಶಸ್ತಿ ಪ್ರಧಾನ ಮಾಡಬೇಕಿತ್ತು.

ಇನ್ನು ಸಮಯ ಅವಕಾಶವಿದೆ. ಪೂಜ್ಯ ಮಾತಾಜಿ ಅವರ ಸಂಸ್ಮರಣಾ ದಿನವೇ ಅದೇ ವೇದಿಕೆ ಮೇಲೆ ಪ್ರಶಸ್ತಿಯನ್ನು ಕೊಡಲಾಗುತ್ತಿರುವ ಈ ಒಂದು ಸಂಘಟನೆಯ ಹೆಸರನ್ನು *ಮರುನಾಮಕರಣ* ಮಾಡುವಂತಹ  ಕೆಲಸ ಆಗಲಿ. ಇದರಿಂದ ಪೂಜ್ಯ ಮಾತಾಜಿಯವರಿಗೆ ನಿಜವಾದ ಗೌರವ (ಶ್ರದ್ಧಾಂಜಲಿ) ಸಲ್ಲಿಸಿದಂತೆ ಆಗುತ್ತದೆ.

ಇಲ್ಲವಾದರೆ ಪೂಜ್ಯ ಮಾತಾಜಿಯವರ *ಸಂಕಲ್ಪಕ್ಕೆ*, ಅವರ *ಆಶಯ* ಗಳಿಗೆ ಧಕ್ಕೆ ತರುವಂತಹ ಕೆಲಸವಾಗುತ್ತದೆ.

🙏🙏🙏  

- ಸಿದ್ದವೀರ ಸಂಗಮದ


*"Tell me who your friends are, and I will tell you who you are"*  ಎಂದು ಸ್ಪ್ಯಾನಿಷ್‌ ಭಾಷೆಯಲ್ಲಿ ಗಾದೆ ಮಾತಿದೆ. ಇದರ ಅರ್ಥ (you can predict a person’s behavior by analyzing the people they hang out with.) ಏನೆಂದರೆ, ನಿಮ್ಮ ಸುತ್ತಮುತ್ತಲಿನ ಜನಗಳ ಬಗ್ಗೆ ಹೇಳಿದರೆ ನಾನು ನಿಮಗೆ ನಿಮ್ಮ ಬಗ್ಗೆ ಹೇಳುತ್ತೇನೆ ಎಂದು. ಮಾತಾಜಿಯವರ ಸಂಸ್ಮರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿರುವ ಹೆಸರುಗಳು ನೋಡಿದರೆ ಅದರಲ್ಲಿರುವ ಬಹುತೇಕರು ಮಾತಾಜಿಯವರು ಇದ್ದಾಗ ಅವರನ್ನು ವಿರೋಧ ಮಾಡಿದವರೇ, ಮಾತಾಜಿಯವರನ್ನು ವಿರೋಧ ಮಾಡಿದವರ ಮೇಲೆ ಇವರಿಗೆ ಇಷ್ಟೊಂದು ಪ್ರೀತಿ ಇರೋದು ನೋಡಿದರೆ, ಇವರು ಮಾತಾಜಿಯವರನ್ನು ವಿರೋಧ ಮಾಡಿದವರಿಗಿಂತ ಕನಿಷ್ಠ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರೆಲ್ಲ ಮಾತಾಜಿಯವರನ್ನು ಬಹಿರಂಗವಾಗಿ ವಿರೋಧಿಸಿದ್ದರು. ಆದರೆ ಮಾತಾಜಿಯವರ ಒಡನಾಟದಲ್ಲಿಯೇ ಅವರ ಆಶ್ರಯದಲ್ಲಿಯೇ ಬೆಳೆದು ಬಾಳನ್ನು ಕಟ್ಟಿಕೊಂಡವರು ಮಾತಾಜಿಯವರಿಗೆ ಅಂತರಂಗದಲ್ಲಿ ದ್ವೇಷಿಸುತ್ತ ಬಹಿರಂಗದಲ್ಲಿ ಅವರ ಹಿತೈಷಿಗಳು ಶಿಷ್ಯರು ಎಂದು ನಟಿಸಿದ್ದಾರೆ ಎಂದು ಶತಸಿದ್ಧವಾಗುತ್ತದೆ. ಅವರು ಲಿಂಗೈಕ್ಯರಾದ ಮೇಲೆ ಬಹಿರಂಗವಾಗಿ ಅವರ ಸಂಶೋಧನೆಗಳನ್ನು ವಿರೋದಿಸುವವರು. ಬಹಿರಂಗದಲ್ಲಿ ವಿರೋಧಿಸಿದವರಿಗಿಂತ ಕಡೆ.

- ಶರಣ : ಸಚ್ಚಿದಾನಂದ ಪ್ರಭು ಚಟ್ನಳ್ಳಿ 

By - ಸಿದ್ದವೀರ ಸಂಗಮದ & ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…