ಕೇವಲ ಹೇಳಿಕೆಗಳಿಗೆ ಸೀಮಿತವಾಗಿರುವ ಮಠ/ಪೀಠಗಳ ಕಾವಿಧಾರಿಗಳು ಹಾಗೂ ಲಿಂಗಾಯತ ಸಂಘಟನೆಗಳ ಮುಖಂಡರು
ಧರ್ಮಗುರು ಬಸವಣ್ಣನವರ ಮೇಲೆ ಅಥವಾ ಲಿಂಗಾಯತ ಧರ್ಮದ ಮೇಲೆ ಯಾವುದೇ ಅಪಚಾರ ಅಥವಾ ಚ್ಯುತಿ ಆದಾಗ ಬಸವಪರ ಸಂಘಟನೆಗಳ ಮುಖ್ಯಸ್ಥರು, ಮತ್ತು ಬಸವ ತತ್ವ ಹೇಳುವ ಮಠಾಧೀಶರು/ಪೀಠಾಧ್ಯಕ್ಷರು ಗಳು ಕೇವಲ ಖಂಡನೆ ಹೇಳಿಕೆಗಳನ್ನು ಕೊಟ್ಟು ಕುಳಿತು ಬಿಡುತ್ತಿದ್ದಾರೆ. ಯಾವುದೇ ಪ್ರತಿಭಟನೆ ಅಥವಾ ಧರಣಿ ಸತ್ಯಾಗ್ರಹ ಅಥವಾ ಹೋರಾಟ ಅಥವಾ ರ್ಯಾಲಿ ಮಾಡುತ್ತಿಲ್ಲ.
*ವಚನದರ್ಶನ* ಪುಸ್ತಕದ ಮೂಲಕ ವೈದಿಕವಾದಿಗಳು ಲಿಂಗಾಯತ ಧರ್ಮದ ಅಸ್ತಿತ್ವಕ್ಕೆ ಕೈ ಹಾಕಿದಾಗ ಕೂಡ ಇವರೆಲ್ಲರೂ ಹೇಳಿಕೆ ಕೊಟ್ಟು ಸುಮ್ಮನೆ ಕುಳಿತರು. ರಸ್ತೆಗೆ ಇಳಿದು ಈ ಪುಸ್ತಕವನ್ನು ಬ್ಯಾನ್ ಮಾಡುವಂತೆ ಯಾವುದೇ ಪ್ರತಿಭಟನೆ ಮಾಡಲಿಲ್ಲ.
ಶಾಸಕ *ಯತ್ನಾಳ* ಧರ್ಮಗುರು ಬಸವಣ್ಣನವರ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ (ಅಪಹಾಸ್ಯ) ಮಾತನಾಡಿದಾಗ, ಮತ್ತು ಗುರು ಬಸವಣ್ಣನವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸುಳ್ಳನ್ನು ವಿಧಾನಸಭೆಯಲ್ಲಿ ಹೇಳಿದಾಗ ಕೂಡ, ಇವರೆಲ್ಲರೂ ಹೇಳಿಕೆ ಕೊಟ್ಟು ಸುಮ್ಮನೆ ಕುಳಿತಿರು. (ಪೂಜ್ಯ ಮಾತೆಮಹಾದೇವಿಯವರ ನಿಷ್ಠಾವಂತ ಅನುಯಾಯಿಗಳು ಮಾತ್ರ ರಸ್ತೆಗೆ ಇಳಿದು ಪ್ರತಿಭಟಿಸಿದರು)
ಇವಾಗ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಅಧ್ಯಕ್ಷ *ಶಂಕರ್ ಬಿದರಿ* ಲಿಂಗಾಯತ ಧರ್ಮಕ್ಕೆ ಸಂಬಂಧವೇ ಇಲ್ಲದ, ರೇಣುಕಾಚಾರ್ಯರ ಜಯಂತಿಯನ್ನು ತಂದು ಬಸವ ಜಯಂತಿಯ ದಿನದಂದು ಆಚರಿಸುವಂತೆ ಹಾಗೂ ರೇಣುಕಾಚಾರ್ಯರ ಫೋಟೋವನ್ನು ಗುರು ಬಸವಣ್ಣನವರ ಫೋಟೋ ಜೊತೆ ಇಡುವಂತೆ *ಸುತ್ತೋಲೆ* ಯನ್ನು ಹೊರಡಿಸಿದ ಮೇಲು ಕೂಡ ಇವರೆಲ್ಲರೂ ಕೇವಲ ಖಂಡನೆ ಹೇಳಿಕೆ ಕೊಟ್ಟು ಕುಳಿತುಬಿಡುತ್ತಿದ್ದಾರೆ.
ಪರಮಪೂಜ್ಯ ಮಾತೆ ಮಹಾದೇವಿಯವರು ಇದ್ದಿದ್ರೆ ಕೇವಲ ಹೇಳಿಕೆಗಳನ್ನು ಕೊಟ್ಟು ಸುಮ್ಮನೆ ಇರುತ್ತಿರಲಿಲ್ಲ. ಈ ಮೇಲಿನ ಎಲ್ಲ ವಿಷಯಗಳಿಗೂ ಕೂಡ *ಪ್ರತಿಭಟನೆ, ಸತ್ಯಾಗ್ರಹ, ರ್ಯಾಲಿ* ಮೂಲಕ ಉತ್ತರ ಕೊಡುತ್ತಿದ್ದರು.
ಪೂಜ್ಯ ಮಾತೆ ಮಹಾದೇವಿಯವರು ಲಿಂಗೈಕ್ಯರಾದ ಮೇಲೆ ಕೂಡ ಪ್ರತಿಭಟನೆ ಮಾಡುವ ಹೋರಾಟ ಮಾಡುವ *ಶಕ್ತಿ, ಸಾಮರ್ಥ್ಯ* ಅವರ ಅನುಯಾಯಿಗಳಾದ ರಾಷ್ಟ್ರೀಯ ಬಸವದಳದ ನಿಷ್ಠಾವಂತ ಶರಣರಲ್ಲಿ ಇದೆ.
ಆದರೆ ಕೆಲವು ಮುಖಂಡರುಗಳು ಎಲ್ಲ ಬಸವಪರ ಸಂಘಟನೆಗಳಿಗೆ ಮುಖ್ಯಸ್ಥನಾಗಬೇಕು ಎಂಬ ಸ್ವಾರ್ಥದಿಂದ, (ಪೂಜ್ಯ ಮಾತಾಜಿಯವರ ಲಿಂಗದೇವ ಸಂಶೋಧನೆಯನ್ನೂ ಬೇಕಂತಲೇ *ನೆಪ* ಮಾಡಿ ) ಬಲಿಷ್ಠ ಸಂಘಟನೆಯಾಗಿದ್ದ ರಾಷ್ಟ್ರೀಯ ಬಸವದಳವನ್ನು ಒಡೆಯಲಾಯಿತು. ಬಸವ ಧರ್ಮಪೀಠವನ್ನು ಕೂಡ ಒಡೆಯಲಾಯಿತು. ನಿಷ್ಠಾವಂತ ಶರಣರು ಈ ಸಂಸ್ಥೆಯಿಂದ ದೂರ ಆಗುವಂತೆ ಮಾಡಿದರು.
ಹಾಗೂ ಇಂಥ ಒಂದು ಬಲಿಷ್ಠ ಸಂಘಟನೆ, ಸಂಸ್ಥೆ ಒಡೆದಾಗ ಅದನ್ನು ಸೇರಿಸುವ ಪ್ರಯತ್ನ ಮಾಡುವ ಬದಲು *ಉರಿಯುವ ಬೆಂಕಿಗೆ ತುಪ್ಪವನ್ನು ಸುರಿಸುವ* ಕೆಲಸ ಈ ಮುಖಂಡರು ಹಾಗೂ ಮಠಾಧೀಶರು ಮಾಡಿದರು.
ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಬಸವಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವದಳ ವತಿಯಿಂದ ಅನೇಕ ಪ್ರತಿಭಟನೆಗಳು, ರ್ಯಾಲಿಗಳೂ ನಡಿತಾ ಇದ್ದವು.
ವೀರಶೈವವಾದಿಗಳು ಮತ್ತು ವೈದಿಕವಾದಿಗಳು ಲಿಂಗಾಯತ ಧರ್ಮದ ಹೊರಗಿನ ಶತ್ರುಗಳಾದರೆ, ತಮ್ಮ ಸ್ವಾರ್ಥಕ್ಕಾಗಿ, ಮುಂದಾಳತ್ವಕ್ಕಾಗಿ ಸಂಸ್ಥೆಗಳನ್ನು ಸಂಘಟನೆಗಳನ್ನು ಒಡೆದು ಆಳುತ್ತಿರುವ ಮುಖಂಡರುಗಳು ಮತ್ತು ಮಠಾಧೀಶರು ಲಿಂಗಾಯತ ಧರ್ಮದ ಒಳಗಿನ ಶತ್ರುಗಳು ಎಂದು ತುಂಬಾ ನೋವಿನಿಂದ ಹೇಳಬೇಕಾಗುತ್ತದೆ.
ಇತ್ತೀಚಿಗೆ ಲಿಂಗಾಯತ ಧರ್ಮದ ಮೇಲೆ ವೀರಶೈವವಾದಿಗಳ ದಾಳಿ ಹೆಚ್ಚಾಗಿದೆ. ಇನ್ನು ಮುಂದೆಯಾದರೂ ಲಿಂಗಾಯತ ಸಂಘಟನೆಗಳ ಮುಖಂಡರು ಮತ್ತು ಲಿಂಗಾಯತ ಮಠಾಧೀಶರು ತಮ್ಮಿಂದ ಆಗಿರುವ ತಪ್ಪನ್ನು ಅರಿತು ವೀರಶೈವವಾದಿಗಳ, ವೈದಿಕವಾದಿಗಳ ಜೊತೆ ಹೋರಾಟ ಮಾಡಬೇಕಾದರೆ ಬಸವ ಧರ್ಮಪೀಠ (ರಾಷ್ಟ್ರೀಯ ಬಸವದಳ)ವನ್ನು ಒಂದುಗೂಡಿಸುವ ಅವಶ್ಯಕತೆ ಇದೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ಹಾಗೂ ಇದಕ್ಕಾಗಿ ಪ್ರಾಮಾಣಿಕತೆಯಿಂದ ಪ್ರಯತ್ನ ಮಾಡಬೇಕು.
ಅವಾಗ ಮಾತ್ರ ಒಗ್ಗಟ್ಟಿನಿಂದ ಹೊರಗಿನ ವಿರೋಧಿಗಳ ಜೊತೆ ಗಟ್ಟಿಯಾಗಿ ಗಣಾಚಾರದಿಂದ ಹೊರಾಡಬಹುದು.
ಇದು ಕಹಿಸತ್ಯ...
🙏🙏🙏
~ ಸಿದ್ಧವೀರ ಸಂಗಮದ




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ