ಶರಣರ ಪರಿಚಯ : ತುರುಗಾಹಿ ರಾಮಣ್ಣನವರು

ಶರಣ ತುರುಗಾಹಿ ರಾಮಣ್ಣನವರು

ಅಂಕಿತ: ಗೋಪತಿನಾಥ ವಿಶ್ವೇಶ್ವರಲಿಂಗ

ಕಾಯಕ: ಪಶುಪಾಲಕ

ಭಕ್ತರ ಮನೆಯ ಗೋವುಗಳನ್ನು ಕಾಯುವ ಕಾಯಕವನ್ನು ಕೈಕೊಂಡ ಇವರ ಕಾಲ ೧೧೬೦ ‘ಗೋಪತಿನಾಥ ವಿಶ್ವೇಶ್ವರಲಿಂಗ’ ಅಂಕಿತದಲ್ಲಿ ರಚಿಸಿದ ೪೬ ವಚನಗಳು ದೊರೆತಿವೆ. ತನ್ನ ವೃತ್ತಿ ವಲಯದ ಅನುಭವವನ್ನು ಆಧ್ಯಾತ್ಮಾನುಭವದ ಜೊತೆ ಸಮೀಕರಿಸಿ ಹೇಳಿದ ರೀತಿ ತುಂಬ ಅರ್ಥಪೂರ್ಣವೆನಿಸಿದೆ. ಕೆಲವು ಬೆಡಗಿನ ವಚನಗಳಲ್ಲಿ ತಾತ್ವಿಕ ವಿವೇಚನೆಯಿದೆ. ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ ಮತ್ತು ಇತರ ಶರಣರು ಎಲ್ಲಿ ಹೋಗಿ ಐಕ್ಯರಾದರು ಎಂಬುದನ್ನು ತಿಳಿಸುವ ವಚನ ಐತಿಹಾಸಿಕ ಮಹತ್ವವನ್ನು ಪಡಿದಿದೆ.

ಕಾಯಕದ ಪರಿಭಾಷೆಯಲ್ಲಿ ಅಧ್ಯಾತ್ಮ ಬೋಧೆ ಮಾಡಿರುವರು. ಹಾಗೆಯೇ ತನ್ನ ಕಾಯಕದ ಬಗೆಗೂ ಹೇಳಿಕೊಂಡಿರುವರು. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ, ಅಕ್ಕಮಹಾದೇವಿ – ಇವರು ಬಯಲಾದ ವಿವರ ನೀಡಿರುವರು.

ಶರಣ ತುರುಗಾಹಿ ರಾಮಣ್ಣನವರ ವಚನ :ಬಂದಿತ್ತು ದಿನ ಬಸವಣ್ಣ ಕಲ್ಲಿಗೆ, ಚನ್ನಬಸವಣ್ಣ ಉಳುವೆಯಲ್ಲಿಗೆ, ಪ್ರಭು ಅಕ್ಕ ಕದಳಿದ್ವಾರಕ್ಕೆ, ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ ್ಯಕ್ಕೆ, ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ, ಅಡಗಿಹರೆಲ್ಲರು ಅಡಗಿದುದ ಕೇಳಿ ನಾ ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು

🙏🙏ಶರಣು🙏🙏ಶರಣಾರ್ಥಿಗಳು🙏🙏

ಮಹಾದೇವ ದಾ ಸಂಖ

ಅಧ್ಯಕ್ಷರು ಕರ್ನಾಟಕವಚನ ಸಾಹಿತ್ಯ ಪರಿಷತ್ತು ಜಮಖಂಡಿ


Please Comment Your Thought on this article

ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…