ಸಂಸತ್ ಭವನದಲ್ಲಿ "ಬಸವ ಜಯಂತಿ" ಇದೇ ಮೊದಲ ಬಾರಿಗೆ

 


ನವದೆಹಲಿ, ಏ. 21- ವಿಶ್ವಕ್ಕೆ ಸಂಸತ್ ಪರಿಚಯಿಸಿದ ಬಸವೇಶ್ವರರ ಜಯಂತಿಯನ್ನು ಮೊದಲ ಬಾರಿಗೆ ನೂತನ ಸಂಸತ್ ಭವನದ ಆವರಣದಲ್ಲಿ ಆಚರಿಸಲು ನಿರ್ಧರಿಸ ಲಾಗಿದೆ. ಈ ಸಂಬಂಧ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಂಸತ್ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣನವರು, ಸಂಸತ್ ಆವರಣ ದಲ್ಲಿ ಬಸವ ಜಯಂತಿ ಆಚರಣೆಗೆ ಅವಕಾಶ ಸಿಕ್ಕಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಒಪ್ಪಿಗೆ ಕೊಟ್ಟಿದ್ದಾರೆ. ಬಸವ ಜಯಂತಿ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಬರಲಿದ್ದಾರೆ. ಏ.30ರಂದು ಬಸವ ಜಯಂತಿ ಆಯೋಜಿಸಲಾಗಿದೆ. ಕರ್ನಾಟಕದ ಬಸವ ಅಭಿಮಾನಿಗಳು, ಮಠಾಧಿಪತಿ ಗಳು ಬರಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಏ.25ರ ಒಳಗಾಗಿ ಮಾಹಿತಿ ನೀಡಬೇಕು. ಕಡ್ಡಾಯವಾಗಿ ಆಧಾರ ಕಾರ್ಡ್ ನೀಡಬೇಕು ಎಂದು ಹೇಳಿದರು. ಸಂಸತ್ ಭವನದೊಳಗೆ ಬಸವಣ್ಣರ ವಚನ: 




2023ರಲ್ಲಿ ಲೋಕಾರ್ಪಣೆ ಗೊಂಡ ನೂತನ ಸಂಸತ್ ಭವನ ವೈಭವೋಪೇತವಾಗಿದೆ. ಈ ಸಂಸತ್ ಭವನ ಹಲವು ವಿಶೇಷತೆಗಳಿಂದ ಕೂಡಿದೆ. ಸಂಸತ್ ಭವನದಲ್ಲಿ ಅಖಂಡ ಭಾರತದ ನಕ್ಷೆ ಯೊಂದಿಗೆ ಭಾರತೀಯ ಪರಂಪರೆ ಸಂಸ್ಕೃತಿಯ ಅನಾ ವರಣಗೊಂಡಿದ್ದು, ಕನ್ನಡ ಕಂಪು ಪಸರಿಸಿದೆ. ಸಂಸತ್ ಭವನದ ಗೋಡೆಯ ಮೇಲೆ ಹಂಪಿಯ ಕಲ್ಲಿನ ರಥವನ್ನು ಕೆತ್ತಲಾಗಿದೆ. ಇದರ ಪಕ್ಕದಲ್ಲೇ ಗೋಡೆಯ “ಕಳಬೇಡ ಕೊಲ ಬೇಡ ಹುಸಿಯ ನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯಪಡ ಬೇಡ ತನ್ನ ಬಣ್ಣಿಸಬೇಡ ಇದಿರ ಹಳಿ ಯಲು ಬೇಡ, ಇದೇ ಅಂತರಂಗಶುದ್ಧಿ ಇದೇ ಬಹಿ ರಂಗಶುದ್ಧಿ ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ' ಬಸವಣ್ಣನವರ ವಚನ ಬರೆಯಲಾಗಿದೆ.


Please Comment Your Thought on this article

ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…