ಶಿವಜ್ಞಾನವನರಿಯದಿರ್ದಡೆ ಆ ಕಾಗೆ, ಕೋಳಿಗಳಿಗಿಂತ ಕರಕಷ್ಟ

 ವಚನ : ವಾಯುಗುಣವ ಸರ್ಪಬಲ್ಲುದು, ಮಧುರಗುಣವ ಇರುವೆ ಬಲ್ಲುದು, ಗೋತ್ರದ ಗುಣವ ಕಾಗೆ ಬಲ್ಲುದು, ವೇಳೆಯ ಗುಣವ ಕೋಳಿ ಬಲ್ಲುದು, ಮಾನವನಾಗಿ ಹುಟ್ಟಿದ ಬಳಿಕ ಶಿವಜ್ಞಾನವನರಿಯದಿರ್ದಡೆ ಆ ಕಾಗೆ, ಕೋಳಿಗಳಿಗಿಂತ ಕರಕಷ್ಟ ಕಾಣಾ ಕಲಿದೇವರ ದೇವಾ.”

ವಾಯುವನ್ನೇ ಆಹಾರವನ್ನಾಗಿಸಿಕೊಂಡು ಜೀವನ ನಿರ್ವಹಣೆ ಮಾಡಬಲ್ಲ ವಿಶಿಷ್ಟ ಶಕ್ತಿ ಸರ್ಪಕ್ಕಿದೆಯೆಂದು ಪ್ರತೀತಿಯಿದೆ. ಮಧುರ ಗುಣವನ್ನು ದೂರದಿಂದಾದರೂ ಅರಿಯಬಲ್ಲ ವಿಶಿಷ್ಟವಾದ ಶಕ್ತಿ ಇರುವೆಗಿದೆಯೆಂಬುದನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿರಲು ಸಾಕು, ಎಲ್ಲಿಯಾದರೂ ಸಿಹಿ ಪದಾರ್ಥವನ್ನಿಟ್ಟರೆ ಆಗಲೇ ಇರುವ ಗಳು ಬಂದು ಆಮಂತ್ರಿಸಿದವರಂತೆ ಮುಕುರುವವು. ಅಷ್ಟೇ ಏಕೆ, ಗಿಡದಲ್ಲಿರುವ ಹಲಸಿನಕಾಯಿ ಹಣ್ಣಾಗಿವೆಯೋ ಇಲ್ಲವೋ ಎಂಬುದನ್ನು ಗಿಡದ ಬೊಡ್ಡೆ ಮೂಸಿನೋ ಡಿಯೇ ಇರುವೆ ತಿಳಿಯುತ್ತದೆಯಂತೆ! ಹಣ್ಣಿದ್ದರೆ ಏರಿ ಹೋಗುತ್ತದಂತೆ. ಇಲ್ಲವಾದರೆ ಇರುವೆ ಗಿಡವನ್ನು ವ್ಯರ್ಥವಾಗಿ ಏರಲಾರದು ! ಕಾಗೆಯ ಬಳಗವೆಂದು ಸಾಮಾನ್ಯವಾಗಿ ಬಳಸುವರು. ಅದಕ್ಕೆ ತನ್ನ ಗೋತ್ರದ ಜ್ಞಾನ ತುಂಬಾ ಜಾಗ್ರತವಾಗಿರುತ್ತದಂತೆ. ಕೋಳಿಗೆ ಸಮಯ ಜ್ಞಾನವಿರುತ್ತದೆಂಬುದನ್ನು ಸಾಮಾನ್ಯವಾಗಿ ಹಳ್ಳಿಗರೆಲ್ಲರೂ ಬಲ್ಲವ ರಾಗಿದ್ದಾರೆ. ಕೋಳಿ ಕೂಗಿದಾಗ ಎದ್ದು ಹೊಲದ ಕೆಲಸಕ್ಕೆ ಹಳ್ಳಿಗರು ಹೋಗುವುದು ಇಂದಿಗೂ ರೂಢಿಯಲ್ಲಿದೆ. ಹಿಂದಿನ ಕಾಲದಲ್ಲಿ ಕೋಳಿಗಳೇ ಗಡಿಯಾರಗಳಾಗಿ ಕೆಲಸ ಮಾಡುತ್ತಿದ್ದವಷ್ಟೆ. ಈ ಪ್ರಾಣಿಗಳು ಒಂದೊಂದು ವಿಶಿಷ್ಟ ಗುಣವನ್ನು ಹೊಂದಿರು ವಂತೆ, ಮಾನವನಿಗೆ ಶಿವಜ್ಞಾನವಿರುವುದೇ ವಿಶಿಷ್ಟವಾಗಿದೆ. ಶಿವನ ಅರಿವನ್ನು ಹೊಂದದ ಮಾನವನನ್ನು ಕಾಗೆಕೋಳಿಗಳಿಗಿಂತ ಕನಿಷ್ಠನೆಂದು ಮಡಿವಾಳ ಮಾಚಿದೇ ವರು ಸುಂದರ ಉಪಮೆಗಳಿಂದ ಸಾರಿ ಹೇಳಿದ್ದಾರೆ.

- ಸದ್ಗುರು ಸ್ವಾಮಿ ಲಿಂಗಾನಂದರು

Please Comment Your Thought on this article

ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…