ಲೋಕದ ಡೊಂಕ ತಿದ್ದಬಾರದೇ..?! (ಭಾಗ-1/7)
ಭಾಗ : ೧
*ಪ್ರಾಗೈತಿಹಾಸಿಕ(Prehistoric) ಕಾಲದಿಂದಲೂ ಈ ಮರ್ತ್ಯಲೋಕದಲ್ಲಿ ಅನೇಕ ಪ್ರವಾದಿಗಳು, ಮಹಾತ್ಮರು, ಸಜ್ಜನರು ಲೋಕದ ಡೊಂಕನ್ನು ತಿದ್ದಿದ್ದಾರೆ. ಅಂತೆಯೇ ಕರ್ತಾರನ ಕಮ್ಮಟವಾದ ಈ ಮರ್ತ್ಯ ಲೋಕ ಇಷ್ಟೊಂದು ಸುಂದರವಾಗಿದೆ. ಅಲ್ಲಲೇ ಅಮಾನವೀಯತೆಯ ನಡುವೆ ಮಾನವೀಯತೆಗಳು, ಕ್ರೌರ್ಯದ ನಡುವ ದಯೆ, ಕರುಣೆಗಳು; ದುರ್ಭಾವದ ನಡೆವೆ ಸದ್ಭಾವಗಳು, ಮೂಢ ಭಕ್ತಿಯ ನಡುವೆ ಸದ್ಭಕ್ತಿಗಳು; ಪರಪೀಡನೆಯ ನಡುವೆ ಪರೋಪಕಾರಗಳು, ಕೃತಘ್ನತೆಯ ನಡುವೆ ಕೃತಜ್ಞತೆನೆಗಳು ವಿಶ್ವಾಸ ದ್ರೋಹದ ನಡುವೆ ವಿಶ್ವಾಸ ನಂಬಿಕೆಗಳು ಇಂತಹ ಇನ್ನೂಅನೇಕ ವೈರುಧ್ಯಗಳ ನಡುವೆ ಸುವಿಚಾರಗಳು ಸತ್ ಚಿಂತನೆಗಳು ಲೋಕದ ಡೋಂಕ ತಿದ್ದಿದ್ದರಿಂದಲೇ ಜೀವಂತವಾಗಿವೆ.*
2585 ವರ್ಷಗಳ (ಕ್ರಿ.ಪೂ.560 ರಲ್ಲಿ) ಹಿಂದೆಯೇ ಪೂಜ್ಯ ಶ್ರೀ ಮಹಾವೀರರು ಲೋಕದ ಡೊಂಕನ್ನು ತಿದ್ದಿದ್ದಾರೆ. ಜಾತಿ ಪದ್ದತಿಯನ್ನು ವಿರೋಧಿಸಿ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದಾಗ, ಬ್ರಾಹ್ಮಣರೇ ಸರ್ವ ಶ್ರೇಷ್ಠ, ವೇದಗಳೇ ಸರ್ವಶ್ರೇಷ್ಠ ಎನ್ನುವುದನ್ನು ಒಪ್ಪದೇ ಇದ್ದಾಗ, ಪ್ರಾಣಿಬಲಿ ಮಾಡುವುದನ್ನು ವಿರೋಧಿಸಿದಾಗ, ಅಹಿಂಸೆ(Non violence)ಯನ್ನು ಪ್ರತಿಪಾದಿಸಿದಾಗ, ವೇದಜರಿಂದ ಕಿರುಕುಳಕ್ಕೊಳಗಾದರು. ತೊಂದರೆಗೊಳಗಾದರು. ಆದರೂ ಲೋಕದ ಡೊಂಕನ್ನು ತಿದ್ದುವುದನ್ನು ಬಿಡಲಿಲ್ಲ. ಅವರು ಲೋಕವನ್ನು ತಿದ್ದಿದ ಸಿದ್ಧಾಂತಗಳ ಸಮೂಹವೇ ಜೈನ ಧರ್ಮವಾಯಿತು.
*2565 ವರ್ಷಗಳ (ಕ್ರಿ.ಪೂ.540ರಲ್ಲಿ) ಹಿಂದೆಯೇ ಪೂಜ್ಯ ಶ್ರೀ ಗೌತಮಬುದ್ಧರು ಲೋಕದ ಡೊಂಕನ್ನು ತಿದ್ದಿದರು. ಜಾತಿ ವ್ಯವಸ್ಥೆಯನ್ನು ತಿದ್ದಿದ್ದರು. ವೇದಗಳ ಸಾರ್ವಭೌಮತ್ವವನ್ನು (authority of vedas)ಅಲ್ಲಗಳೆದರು. ಸಾಮಿಜಿ ಧಾರ್ಮಿಕ ಭೇದ ಭಾವವನ್ನು (Social & Religious Discrimination) ತೊಲಗಿಸಲು ಪ್ರಯತ್ನಿಸಿದರು. ಇದರಿಂದಾಗಿ ಅವರು ಅಂದಿನ ಬ್ರಾಹ್ಮಣ ವ್ಯವಸ್ಥೆಯಿಂದ ಅನೇಕ ವಿರೋಧಗಳನ್ನು ಎದುರಿಸಬೇಕಾಯಿತು. ಆದರೂ ಅವರು ಲೋಕದ ಡೊಂಕನ್ನು ತಿದ್ದುವುದನ್ನು ಬಿಡಲಿಲ್ಲ. ಕೊನೆಗೆ ಬೌದ್ಧ ಧರ್ಮ ಭಾರತ ದೇಶವನ್ನು ತೊರೆಯಿತೇ ಹೊರತು ಲೋಕದ ಡೊಂಕನ್ನು ತಿದ್ದುವುದನ್ನು ಬಿಡಲಿಲ್ಲ. ಅವರು ಲೋಕವನ್ನು ನಿದ್ದಿದ ನಡೆ ನುಡಿಗಳ ಸಮೂಹವೇ ಬೌದ್ಧ ಧರ್ಮವಾಯಿತು.*
2445 ವರ್ಷಗಳ (ಕ್ರಿ.ಪೂ. 420ರಲ್ಲಿ) ಹಿಂದೇಯೇ ಪೂಜ್ಯ ಶ್ರೀ ಸಾಕ್ರೆಟಿಸ್ ಲೋಕದ ಡೊಂಕ ತಿದ್ದಿದ್ದಾರೆ. ಲೋಕದ ಡೊಂಕ ತಿದ್ದಲೆತ್ನಿಸಿದಾಗ ಲೋಕ ನೀಡಿದ ವಿಷವನ್ನೇ ಕುಡಿದು ಪ್ರಾಣ ಬಿಟ್ಟರೇ ಹೊರತು ಲೋಕದ ಡೊಂಕನ್ನು ತಿದ್ದುವುದನ್ನು ಬಿಡಲಿಲ್ಲ.
2025 ವರ್ಷಗಳ ಹಿಂದೆಯೇ ಪೂಜ್ಯ ಶ್ರೀ ಯೇಸುಕ್ರಿಸ್ತರು ಲೋಕದ ಡೊಂಕು ತಿದ್ದಿದ್ದಾರೆ. ಲೋಕದ ಡೊಂಕ ತಿದ್ದುವಾಗ ಲೋಕ ನೀಡಿದ ಡೊಡ್ಡ ದೊಡ್ಡ ನೋವುಗಳನ್ನುಡಂಡರು. ಕೊನೆಗೆ ಶಿಲುಬೆ ಏರಿ ಪ್ರಾಣ ಬಿಟ್ಟರೇ ಹೊರತು ಲೋಕದ ಡೊಂಕ ತಿದ್ದುವುದನ್ನು ಬಿಡಲಿಲ್ಲ. ಅವರು ತಿದ್ದಿದ ಲೋಕದ ಡೊಂಕಿನ ವಿಚಾರಗಳ ಗುಚ್ಛವೇ ಕ್ರೈಸ್ಥ ಧರ್ಮವಾಯಿತು.


🙏ಸಮಾಜವು ತಪ್ಪು ದಾರಿಗೆ ಹೋಗುತ್ತಿದ್ದರೆ ಬುದ್ದಿವಂತರು, ಧರ್ಮ ಗುರುಗಳಾದವರು, ಸಮಾಜಕ್ಕೆ ದಿಕ್ಕು ದೆಸೆ ತೋರಿಸುವ, ಡೊಂಕುಗಳನ್ನು ತಿದ್ದಲೇ ಬೇಕಾಗುತ್ತದೆ ಶರಣರೆ.
ಪ್ರತ್ಯುತ್ತರಅಳಿಸಿ🙏ಶರಣು ಶರಣಾರ್ಥಿಗಳು