ಲೋಕದ ಡೊಂಕ ತಿದ್ದಬಾರದೇ? (ಭಾಗ-6/7)
ಒಂದು ವೇಳೆ ಗುರು ಬಸವಣ್ಣನವರು ಲೋಕದ ಡೊಂಕನ್ನು ತಿದ್ದದ್ದೇ ಹೋಗಿದ್ದರೆ ಇಂತಹ ಸುಂದರವಾದ, ವೈಚಾರಿಕವಾದ ಮನಸ್ಸೊಪ್ಪುವ ಹೃದಯ ಮೆಚ್ಚುವ ಇಂತಹ ಲಿಂಗಾಯತ ಧರ್ಮ ನಮಗೆ ಸಿಗುತ್ತಿತ್ತೇ?
ವಾಸ್ತವಿಕವಾಗಿ ಸಹಸಾಧಕರು ಸಮಾಜ ಬಾಂಧವರು ಧರ್ಮ ಪೀಠಾಧಿಕಾರಿಗಳು ಮತ್ತು ಎಲ್ಲರೂ ತಮಗೆ ಕಂಡ ತಮ್ಮ ಸಹಚರ್ಯರರ ತಪ್ಪನ್ನು ತಿದ್ದಬೇಕು. ತಮ್ಮ/ತಂಗಿ ತಪ್ಪಿದಾಗ ಅಣ್ಣ/ ಅಕ್ಕ ತಿದ್ದಬೇಕು. ಅಣ್ಣ/ ಅಕ್ಕ ತಪ್ಪಿದಾಗ ತಮ್ಮ/ತಂಗಿ ತಿಂದಬೇಕು. ಮಕ್ಕಳು ತಪ್ಪಿದಾಗ ತಂದೆ ತಾಯಂದಿರು ತಪ್ಪಬೇಕು. ಕೆಲವೊಮ್ಮೆ ತಂದೆ ತಯಾಂದಿರು ತಪ್ಪು ಮಾಡಿದಾಗ ಮಕ್ಕಳು ತಿದ್ದಬೇಕಾಗುತ್ತದೆ. ಒಟ್ಟಾರೆ ಯಾರೆ ತಪ್ಪು ಮಾಡಿದರು ಹಿರಿಯರು ಕಿರಿಯರು ಎನ್ನುವ ಭೇದವಿಲ್ಲದೆ ತಪ್ಪು ಎನ್ನುವುದು ಕಂಡಾಗ ತಿದ್ದಲೇಬೇಕು.
ಶಿಷ್ಯ ತಪ್ಪುಮಾಡಿದಾಗ ಗುರು ತಿದ್ದಬೇಕು(ಸಾಮರ್ಥ್ಯವಿದ್ದರೆ), ಗುರು ತಪ್ಪುಮಾಡಿದಾಗ ಶಿಷ್ಯ ತಿದ್ದಬೇಕು(ಸಾಮರ್ಥ್ಯವಿದ್ದರೆ) ಇಬ್ಬರೂ ತಪ್ಪು ಮಾಡಿದಾಗ ಭಕ್ತರು ತಿದ್ದಬೇಕು. ಲೋಕದ ಡೊಂಕ ನಾವೇಕೆ ತಿದ್ದಬೇಕು ಎಂದರೆ, ಈ ಕರ್ತಾರನ ಕಮ್ಮಟವನ್ನು ಸುಂದರಗೊಳಿಸುವವರಾರು?
ಅಲ್ಲಲೇ ಅಮಾನವೀಯತೆಯ ನಡುವೆ ಮಾನವೀಯತೆಗಳನ್ನು ಕ್ರೌರ್ಯದ ನಡುವ ದಯೆ, ಕರುಣೆಗಳನ್ನು; ದುರ್ಭಾವದ ನಡೆವೆ ಸದ್ಭಾವಗಳನ್ನು, ಮೂಢ ಭಕ್ತಿಯ ನಡುವೆ ಸದ್ಭಕ್ತಿಗಳನ್ನು; ಪರಪೀಡನೆಯ ನಡುವೆ ಪರೋಪಕಾರಗಳನ್ನು, ಕೃತಘ್ನತೆಯ ನಡುವೆ ಕೃತಜ್ಞತೆನೆಗಳನ್ನು, ವಿಶ್ವಾಸ ದ್ರೋಹದ ನಡುವೆ ವಿಶ್ವಾಸ ನಂಬಿಕೆಗಳನ್ನು, ಮಾನವನ ಹೆಗಲ ಮೇಲೆ ಮೆರೆಯುವವರೆ ನಡುವೆ, ಶರಣತ್ವವನು ಇಂತಹ ಇನ್ನೂಅನೇಕ ವೈರುಧ್ಯಗಳ ನಡುವೆ ಸುವಿಚಾರಗಳು ಸತ್ ಚಿಂತನೆಗಳನ್ನು ಜೀವಂತವಾಗಿರುಸುವುದು ಹೇಗೆ?
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ...)
-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ
ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ