ಲೋಕದ ಡೊಂಕ ತಿದ್ದಬಾರದೇ? (ಭಾಗ-7/7)
ಇಂತಹ ತಪ್ಪುಗಳನ್ನೇ ಮಾಡಿದಾಗ, ತಪ್ಪು ತಪ್ಪನ್ನೇ ಬಿತ್ತಿ ತಪ್ಪನ್ನೇ ಬೆಳೆದು, ತಪ್ಪು ತಪ್ಪಾಗಿ ತಪ್ಪಾಗುವುದರಲ್ಲಿ ಸಂದೇಹವೇ ಇಲ್ಲ. ತಪ್ಪು ಭಾವನೆ ತಪ್ಪು ವರ್ತನೆಯಿಂದ, ಧರ್ಮಪೀಠವನ್ನು ತಪ್ಪಾದ ದಾರಿಯಲ್ಲಿ ಕೊಂಡೊಯ್ಯುತ್ತಾರೆ.
ಸಂವಿಧಾನ ಕಾಯ್ದೆ ಕಾನೂನುಗಳು ರಚನೆಯಾಗಿದ್ದು ಲೋಕದ ಡೊಂಕು ತಿದ್ದಲಿಕ್ಕೆಯೇ. ಒಂದು ವೇಳೆ ಲೋಕದ ಡೊಂಕ ಯಾರೂ ತಿದ್ದದೇ ಹೋದರೆ ಭೂಮಿಯ ಮೇಲೆ ಮನುಕುಲ ಅಳಿದುಹೋಗುತ್ತದೆ. ಕರ್ತಾರನ ಕಮ್ಮಟವಾದ ಈ ಮರ್ತ್ಯಲೋಕ ಹಾಳು ಬೀಳುತ್ತದೆ. ಇದು ಕರ್ತಾರನಾದ ಲಿಂಗದೇವನಿಗಿ ಇಷ್ಟವಾಗದ ವಿಚಾರ. ಅದಕ್ಕಾಗಿಯೇ ಕಾಲ ಕಾಲಕ್ಕೆ ಲೋಕದ ಡೊಂಕನ್ನು ತಿದ್ದಲು ಗುರು ಬಸವಣ್ಣನವರಂತಹ ಗುರುವನ್ನು, ಲಿಂಗಾನಂದ ಗುರುದೇವರಂತಹ ಮಾತೆ ಮಹಾದೇವಿಯವರಂತಹ ಜಂಗಮರನ್ನು, ಗುರು ಬಸವಣ್ಣನವರ ಈ ವಚನ ವಿವರಿಸಿ ತನ್ನ ಡೊಂಕನ್ನು ತಿದ್ದಿಕೊಳ್ಳುವ ನನ್ನಂತಹವರನ್ನು, ಇದನ್ನು ಓದಿ ತಮ್ಮ ಡೊಂಕನ್ನು ತಿದ್ದಿಕೊಳ್ಳುತ್ತಿರುವ ನಿಮ್ಮಂತಹವರನ್ನು ಈ ಮರ್ತ್ಯಲೋಕ್ಕೆ ಕಳುಹಿಸಿ ಇದನ್ನು ಸುಂದರಗೊಳಿಸುತ್ತಾನೆ. ಅಂತಹ ಕರ್ತಾರ ಲಿಂಗದೇವನಿಗೆ, ಗುರು ಬಸವಣ್ಣನವರಿಗೆ, ಅವರ ಪರಂಪರೆಯ ನಿಜ ಶರಣರಿಗೆ ಅನಂತ ಕೋಟಿ ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು.
-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ
ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ
.jpeg)

ಶರಣರೇ , ಈ ವಚನ ಈಗ ಅದರ ನಿಜ ಅರ್ಥಕ್ಕೆ ಬಂತು , ಇಲ್ಲಾ ದ್ದಿದರೆ , ಈ ಸಮಾಜದಲ್ಲಿ ಸ್ವಾರ್ಥಿಗಳು ಕೆಟ್ಟ ಕೆಟ್ಟ ಕೆಲಸಕ್ಕೂ ತಮಗೆ ತಕ್ಕಂತೆ ಬಳಸಿಕೊಂಡು , ಮೇಲಿಂದ ಗುರು ಬಸವಣ್ಣನವರೆ ಈ ವಚನ ದಲ್ಲಿ ಲೋಕದ ಡೊಂಕ ನೀವೇಕೆ ತಿದ್ದುವಿರಿ ಅಂತ ಹೇಳಿಲವೇ ಎಂದು ಪ್ರಶ್ನೆ ಮಾಡುತ್ತಾರೆ , ಕಾರಣ ಈಗ ನೀವು ಸತ್ಯದ ವರಿಗಲ್ಲಿಗೆ ಹಚ್ಚಿದಿರಿ, ತುಂಬಾ ಸಂತೋಷ ಧನ್ಯವಾದಗಳು ಶರಣು ಶರಣಾರ್ಥಿ, ಮಲ್ಲಿಕಾರ್ಜುನ ನಾಗಶೆಟ್ಟಿ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೂಗನೂರ್ ಗ್ರಾಮದವರು
ಪ್ರತ್ಯುತ್ತರಅಳಿಸಿ