ಯಾರು ? ಓಂ ಪದವನ್ನು ಬಳಸಬೆಡಿ ಅಂತ ಹೆಳಿದರೊ ಗೊತ್ತಿಲ್ಲಾ, ಆದರೆ ಅವರ ಶಿಷ್ಯಂದಿರು ಆಮಂತ್ರಣ ಪತ್ರಿಕೆಯಲ್ಲಿ ಓಂ ಪದ ವನ್ನು ಬಿಟ್ಟು, ಶ್ರೀ ಗುರು ಬಸವಲಿಂಗಾಯ ನಮಃ ವನ್ನು ಬಳಸುತ್ತಾರೆ, ಇದರಿಂದ ಅಂಥಹ ಕಾವಿಧಾರಿಗಳು ಯಾರಿರಬಹುದೆಂದು ಗುರುತಿಸಬಹುದು. ಆದಿ ಶರಣರು ತಮ್ಮ ವಚನಗಳಲ್ಲಿ "ಪ್ರಣವ" , "ಓಂ" ಪದಗಳನ್ನು ಬಹಳಕಡೆ Positiveಯಾಗಿ ಬಳಸಿದ್ದಾರೆ. ಸ್ವತಂತ್ರ ಧರ್ಮವಾದ ಜೈನ ಹಾಗು ಸಿಖ್ ಗಳಲ್ಲಿ ಓಂ ಪದದ ಬಳಕೆ ಇದೆ, ಈ ದೃಷ್ಟಿಕೋನ ದಿಂದ ನೊಡಿದರೆ, ಲಿಂಗಾಯತ ಸ್ವತಂತ್ರ ಧರ್ಮವಾಗದಂತೆ ತಡೆ ಹಿಡಿಯುವ ನಿಟ್ಟಿನಲ್ಲಿ ಓಂ ಪದ ಬಳಕೆಯನ್ನು ಬಿಡಲು ತಮ್ಮ ಭಕ್ತರನ್ನು ಮನವಲಿಸಿದ್ದಾರೆ, ಅನಿಸುತ್ತದೆ. ನಿಮ್ಮ ವಿಚಾರವೆನು ? ಓಂಕಾರವೇ ನಾದಮಯ. ಓಂಕಾರವೇ ಮಂತ್ರಮಯ. ಓಂಕಾರವೇ ಪರಿಪೂರ್ಣವಾಗಿ ಸರ್ವವ್ಯಾಪಕತ್ವವನ್ನುಳ್ಳುದು ನೋಡಾ. ಪ್ರಣವವೇ ಪರಮಾತ್ಮ ಸ್ವರೂಪವಾಗಿ ಪರಮೇಶ್ವರನ ಗೌಪ್ಯಮುಖ ನೋಡಾ. ಪ್ರಣವವೆ ಶಿವಶರಣರ ಹೃದಯಾದ್ಥಿಪತಿ ಇದು ಕಾರಣ, ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವಧ್ಯಾನದಲ್ಲಿ ತರಹರವಾಗಿ ಪ್ರಣವಸ್ವರೂಪನಾಗಿದ್ದೆನಯ್ಯ. ಪಂಚಾಕ್ಷರವೆ ಪಂಚಬ್ರಹ್ಮಮಯವಾಗಿ ಆ ಪಂಚಾಕ್ಷರಿಮಂತ್ರವೆ ಶರೀರವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. - ತೋಂಟದ ಸಿದ್ಧಲಿಂಗ ಶಿವಯೋಗಿಗಳು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ
ಇಂದು ಬೆಳಗ್ಗೆ ಟಿಫನ್ ಮಾಡ್ತಾ ಇರುವಾಗ ನಮ್ಮ ಮಾಮ ಕೇಳಿದ್ರು. ಮಾಮ: ಏನ್ರಿ ವಿಶ್ವನಾಥ, ಕೆನ್ನೇರಿ ಸ್ವಾಮಿ ಏನೋ ಬಹಳ ಹಗುರವಾಗಿ ಮಾತಾಡಿದ್ರಂತೆ. ಏನದು? ವಿಶ್ವನಾಥ : ಏನ್ ಹೇಳೋದ್ರಿ ಮಾಮ, ಇಂಥ ಸ್ವಾಮಿಗಳು ಒಬ್ಬರಲ್ಲ. ತುಂಬ ಜನ ಇದ್ದಾರೆ. ಒಬ್ಬ ಕೆನ್ನೇರಿ, ಒಬ್ಬ ಸದಾಶಿವಾನಂದ ಸ್ವಾಮಿ, ಮತ್ತೊಬ್ಬ ಯತ್ನಾಳ. ಮನಸ್ಸಿಗೆ ಬಂದಹಾಗೆ ಮಾತಾಡ್ತಾರೆ. ಮಾಮ : ಅಲ್ಲಾ ವಿಶ್ವನಾಥ, ಇಷ್ಟ ದೊಡ್ಡ ಲಿಂಗಾಯತ ಒಗ್ಗೂಟ ಇದೆ, ದೊಡ್ಡ ದೊಡ್ಡ ಮಠದ ಸ್ವಾಮಿಗಳು ಇದ್ದಾರೆ. ಅಂದ್ಮೇಲೆ ಇಂಥ ಟೀಕೆ–ಟಿಪ್ಪಣಿ ಬರೋದಾ? ವಿಶ್ವನಾಥ : ನಾವು ಒಗ್ಗಟ್ಟಿಲ್ಲಾ ಅಂದ್ರೆ, ಇಂಥ ಗುದ್ದಾಟ ಸಹಜ. ಇವತ್ತು ಈ ಸ್ವಾಮಿ ಹೇಳ್ತಾನೆ, ನಾಳೆ ಮತ್ತೊಬ್ಬ ಹೇಳ್ತಾನೆ. ಮಾವ : ಅಂದ್ರೆ ಮತ್ತೆ ಏನ್ ಮಾಡ್ತೀರಿ? ವಿಶ್ವನಾಥ : ನಾವು ಉತ್ತರ ಕೊಡ್ತಾ ಇರ್ತೀವಿ ಮಾಮ. ನಮ್ಮಂಥವರು ಇರೋವರೆಗೂ ಕೊಡ್ತೀವಿ. ನಾವಿಲ್ಲ ಅಂದ್ರೆ ನಮ್ಮ ಮಕ್ಕಳು ಕೊಡ್ತಾರೆ, ಅವರ ಮಕ್ಕಳು ಮುಂದಕ್ಕೆ ಕೊಡ್ತಾರೆ. ಮಾಮ : ಮಕ್ಕಳೇನು ಉತ್ತರ ಕೊಡ್ತಾರೆ ರಿ? ಎಲ್ಲಾ ಬಸವಪರ ಸಂಘಟನೆಗಳಲ್ಲಿ ಬರೀ ಬಿಳಿ ಕೂದಲವರು, ತಲೆಗೋಳಿ ಜನರೇ ತುಂಬಿರ್ತಾರೆ. ರಾಷ್ಟ್ರೀಯ ಬಸವದಳದಲಗಲ್ಲಿ ಅಲ್ಲಿ ಇಲ್ಲಿ ಕೆಲ ಹುಡುಗರು ಕಾಣಿಸ್ತಾರೆ ಅಷ್ಟೇ. ಅದನ್ನ ಬಿಟ್ಟರೆ ಯಾವ ಸಂಘಟನೆಯಲ್ಲಿ ಯುವಕರು ಇದ್ದಾರೆ ಹೇಳ್ರಿ? ವಿಶ್ವನಾಥ : ಅದು ನಿಜ ಮಾತು ಮಾಮ. ಚೆನ್ನಾಗಿರೋ ಸಂಘಟನೆಗಳನ್ನು ಒಡೆದವರು ಯಾರು? ನಮ್ಮ ಲಿಂಗಾಯತ ಕಾವಿಧಾರಿಗಳೇ ತಾನೆ....
ಬಸವ ಧರ್ಮ ಪೀಠ ಒಡೆಯಲು ಗಂಗಾಮಾತಾಜಿಯವರ ಮತ್ಸರ ಭಾವನೆ ಅಧಿಕಾರದ ದುರಂಕಾರ ಕೀಳು ಮಟ್ಟದ ವಿಚಾರ ಮತ್ತು ಅಯೋಗ್ಯತೆ ಮುಖ್ಯ ಕಾರಣ ಇನ್ನುಳಿದ ಅಪ್ಪಾಜಿ ಮಾತಾಜಿಯವರ ವಿರೋಧಿಗಳು ಕಾರಣ
ಪ್ರತ್ಯುತ್ತರಅಳಿಸಿYES " WHY NOT "
ಪ್ರತ್ಯುತ್ತರಅಳಿಸಿಒಡೆಯಲು ಅನುವು ಮಾಡಿಕೊಡುವವರು ಇರುವವರೆಗೂ ಒಡೆಲು ಬರುವವರು ಇರುತ್ತಾರೆ. ಇದು ಬ್ರಿಟಿಷರ ಕಾಲದಿಂದ ನಡೆದು ಬಂದಿದೆ. ಅನುವು ಮಾಡಿಕೊಡುವ ಜನಕ್ಕೆ ಬುದ್ದಿ ಬರಬೇಕು ಅಷ್ಟೇ.
ಪ್ರತ್ಯುತ್ತರಅಳಿಸಿ