ಭಾಲ್ಕಿ ಶ್ರೀಗಳೇ ತಮಗೆ ಲಿಂಗೈಕ್ಯ ಮಾತಾಜಿಯವರ ಸಂಶೋಧನೆ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?
ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರೆ, ಕಲ್ಯಾಣ ಕಿರಣದಲ್ಲಿ ಪ್ರಕಟವಾದ ಅಭಿನಂದನೆಗಳು ಎಂಬ ಲೇಖನದಲ್ಲಿ ಲಿಂಗೈಕ್ಯ ಮಾತಾಜಿಯವರನ್ನು ಪ್ರಾರಂಭದಲ್ಲಿ ಹಾಡಿ ಹೊಗಳಿ, ನಂತರ ಪರೋಕ್ಷವಾಗಿ ಅವಮಾನಿಸುವ ಕೃತ್ಯ ಮಾಡಿದ್ದೀರಿ. ಲಿಂಗದೇವವು ದೇವರ ಹೆಸರು ಎಂದು ಒಪ್ಪಿಕೊಳ್ಳಲು ತಮಗೆ 25 ವರ್ಷಗಳು ಬೇಕಾದವೇ??? ಹಾಗಾದರೆ ತಮಗೆ ಮಾತಾಜಿ ಅವರ ಸಂಶೋಧನೆ ಲಿಂಗದೇವ ವಚನಾಂಕಿತ ಅರ್ಥ ಮಾಡಿಕೊಳ್ಳಲು ಇನ್ನು 25 ವರ್ಷಗಳು ಬೇಕಾಗುತ್ತವೆ ಎಂದೆನಿಸುತ್ತದೆ.
ಇತ್ತೀಚಿಗೆ ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಗುರು ಬಸವಣ್ಣನವರ ಭಾವಚಿತ್ರದ ಜೊತೆಗೆ *ನಂದಿ ಮೂರ್ತಿ* ಯ ಭಾವಚಿತ್ರವನ್ನು ಹಾಕಿ ಕಾರ್ಯಕ್ರಮ ಮಾಡಲಾಗಿತ್ತು. ಗುರು ಬಸವಣ್ಣನವರಿಗೆ ಅಪಚಾರ ವಾಗಿದ್ದ ಆ ಒಂದು ಕಾರ್ಯಕ್ರಮದಲ್ಲಿ *ಯಾವುದೇ ಚಕಾರವೇತ್ತದೆ ಮೌನವಾಗಿ* ಭಾಗವಹಿಸಿ ಬಂದಿರುವ ತಮಗೆ ಲಿ0.ಮಾತಾಜಿಯವರ ಸಂಶೋಧನೆ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ ???
*ಪ್ರಶ್ನೆ ಮಾಡಿದರೆ ಸರಕಾರದಿಂದ ಬರುವ ಅನುದಾನಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಭಯವೇ???*
ಅನೇಕ ಶಾಲಾ ಕಾಲೇಜುಗಳನ್ನು ತೆಗೆದು ಲಾಭ ನಷ್ಟದ ವ್ಯವಹಾರಗಳಲ್ಲಿ (ಚಿಂತೆಗಳಲ್ಲಿ) ಮುಳುಗಿಹೋಗಿರುವ ತಮಗೆ ಲಿ0.ಮಾತಾಜಿಯವರ ಸಂಶೋಧನೆ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ???
ಈ ಲೇಖನದಲ್ಲಿ ತಾವು "12 ವರ್ಷಗಳ ಚಿಂತೆ ಇಂದು ನಿಶ್ಚಿಂತೆ ಆಯಿತು" ಎಂಬ ಗುರು ಬಸವಣ್ಣನವರ ವಾಕ್ಯವನ್ನು ಹಿಂದಿನ ಪರಿಸ್ಥಿತಿಗೆ ಹೋಲಿಸಿದ್ದೀರಿ. ಬಸವಣ್ಣನವರು ಯಾವ ಸಂದರ್ಭದಲ್ಲಿ ಈ ರೀತಿ ಹೇಳಿದ್ದಾರೆ ಎಂಬ ಅರಿವು ತಮಗಿದೆಯೇ? ಸ್ಥಾವರ ಲಿಂಗದ (ಕೂಡಲಸಂಗನ) ಪೂಜಕರಾಗಿದ್ದ ಬಸವಣ್ಣನವರಿಗೆ ಲಿಂಗದೇವನು ಸಿಕ್ಕಿದಕ್ಕಾಗಿ ಅವರ ಚಿಂತೆ ನಿಷ್ಚಿಂತೆಯಾಯ್ತು. ಆದರೆ *ತಮ್ಮ ಚಿಂತೆ ಗುರು ಬಸವಣ್ಣನವರ ಚಿಂತೆಗೆ ವಿರುದ್ಧವಾಗಿದೆ* ಎಂಬುದು ಇದರಿಂದ ಗೊತ್ತಾಗುತ್ತದೆ. ಹಾಗಾದರೆ ಈ ಮಾತನ್ನು ಹೇಳಿ *ಮಾತಾಜಿಯವರು ಲಿಂಗೈಕ್ಯವಾದ ಮೇಲೆ ಬಸವ ಧರ್ಮ ಪೀಠದಲ್ಲಿ ಆಗುತ್ತಿರುವ ಅಲ್ಲೋಲ ಕಲ್ಲೋಲಗಳ ಹಿಂದೆ ತಮ್ಮ ಕೈವಾಡ ಇದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತೆ ಆಯ್ತು*....
ಭಾಲ್ಕಿ ಶ್ರೀಗಳೇ ಚಿಂತೆ ಮಾಡುವುದಾದರೆ, ಲಿಂಗಾಯತ ಧರ್ಮ ಪ್ರಚಾರ ಮಾಡುವ ಚಿಂತೆ ಮಾಡಿ..
ಲಿಂಗಾಯತರಲ್ಲಿ ಏಕದೇವೋಪಾಸನೆ ಆಚರಣೆಯಲ್ಲಿ ತರುವುದು ಹೇಗೆ ಎಂಬುದರ ಬಗ್ಗೆ ಚಿಂತೆ ಮಾಡಿ...
ನೂತನವಾಗಿ ನಿರ್ಮಿಸಲಾಗುತ್ತಿರುವ ಅನುಭವಮಂಟಪವನ್ನು ವೈದಿಕತೆಯ ಸ್ಪರ್ಶದಿಂದ ದೂರವಿಡುವುದು ಹೇಗೆ ಎಂಬುದರ ಬಗ್ಗೆ ಚಿಂತೆ ಮಾಡಿ...
ಅದನ್ನೆಲ್ಲ ಬಿಟ್ಟು ತಮ್ಮ ಕೆಲವು ದಾರಿ ತಪ್ಪಿಸುವ ಕೆಲವು ಸ್ವಾರ್ಥಿ ಶಿಷ್ಯರ (ವ್ಯಾಪಾರಿಗಳ) ಮಾತು ಕೇಳಿ ಬಸವ ಧರ್ಮ ಪೀಠವನ್ನು ಒಡೆಯುವ, ಹೀನ ಕೃತ್ಯಕ್ಕೆ ಕೈ ಹಾಕಬೇಡಿ....
*ದಯವಿಟ್ಟು ಪೂಜ್ಯರೆ ತಮ್ಮ ಲಕ್ಷ್ಯ ಬಸವ ತತ್ವ ಮತ್ತು ಲಿಂಗಾಯತ ಧರ್ಮ ಹೋರಾಟದ ಕಡೆಗೆ ಇರಲಿ
ಬಸವ ಧರ್ಮ ಪೀಠದ ಚಿಂತೆ ಮಾಡಿ ಸೊರಗಬೇಡಿ
ಇಂತಿ ಬಸವ ಸೇವಕರ ಸೇವಕ
ಬಸವ ಸೇವಕ ವೀರೇಶ್ ಗಂಗಾವತಿ


ಪರಮ ಪೂಜ್ಯ ಜಗದ್ಗುರು ಡಾಕ್ಟರ್ ಮಾತೇಮಾಹಾದೇವಿ ಮಾತಾಜಿಯವರ ವಿರೋಧಿ ಭಾಲ್ಕಿ ಸ್ವಾಮಿ
ಪ್ರತ್ಯುತ್ತರಅಳಿಸಿ