Part 4 : ಲಿಂಗದೇವ ಮತ್ತು ಕೂಡಲ ಸಂಗಮದೇವ ಒಂದು ಅಧ್ಯಯನ

ಲಿಂಗದೇವ ಮತ್ತು ಕೂಡಲ ಸಂಗಮದೇವ ಒಂದು ಅಧ್ಯಯನ ಭಾಗ-4

-ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ (9886694454)



ಬಿಳಿಯ ಕರಿಕೆ , ಕಣಿಗಿಲೆಲೆಯ , 

ತೊರೆಯ ತಡಿಯ ಮಳಲ ತಂದು , 

ಗೌರಿಯ ನೋನುವ ಬನ್ನಿರೆ. 

ಚಿಕ್ಕ ಚಿಕ್ಕ ಮಕ್ಕಳೆಲ್ಲರು ನೆರೆದು 

ಅನುಪಮದಾನಿ ಕೂಡಲಸಂಗಮದೇವ 

ಗಂಡನಾಗಬೇಕೆಂದು

ಗುರು ಬವಣ್ಣನವರು ಬಹುದೇವತೋಪಾಸನೆ ಆಚರಣೆ ಮಾಡುತ್ತಿದ್ದ ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯವರ ಚಿದ್ಗರ್ಭದಲ್ಲಿ ಜನಿಸಿದ್ದರು. ಆದರೆ ಅವರಿಗೆ ಬಾಲ್ಯದಲ್ಲಿಯೇ ಬಹುದೇವತೋಪಾಸನೆ ಇಷ್ಟವಾಗಲಿಲ್ಲ.

ಶಿವನ ಲೀಲೆ ಹಾಗು ಶಿವಭಕ್ತರ ಕಥೆಗಳನ್ನು ತಮ್ಮ ತಂದೆ-ತಾಯಿ, ಅಜ್ಜ-ಅಜ್ಜಿಯರಿಂದ ಕೇಳಿದ ಮೇಲೆ ಅವರಿಗೆ ಶಿವಭಕ್ತಿ ತುಂಬಾ ಇಷ್ಟವಾಯಿತು. ಹೀಗಾಗಿ ಗುರು ಬಸವಣ್ಣನವರು ಬಾಲ್ಯದಲ್ಲಿ ಶಿವನನ್ನೇ ದೇವರೆಂದು ನಂಬಿ ಏಕ ದೇವತೋಪಾಸಕರಾದರು. ಇದಕ್ಕೆ ಕಾರಣ ಶಿವನ ಅಗಾಧವಾದ ಆಧ್ಯಾತ್ಮಿಕ ಮತ್ತು ಪವಾಡಸದೃಶ್ಯವಾದ ವ್ಯಕ್ತಿತ್ವ. 

ಶಿವನು ಶಿವ ಭಕ್ತರಿಗೆ ಪರೀಕ್ಷಿಸಿ, ಕಾಡಿಸಿ, ಅಳಲಿಸಿ, ಬಳಲಿಸಿ, ನಂತರ ಆ ಭಕ್ತರನ್ನು ಮೆಚ್ಚಿಕೊಳ್ಳುವ ಕಥೆಗಳು ಗುರು ಬಸವಣ್ಣನವರಿಗೆ ತುಂಬಾ ಇಷ್ಟವಾಗಿ ಶಿವ ಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆದರು.

ಗುರು ಬಸವಣ್ಣನವರ ತಾಯಿ ಮಾದಲಾಂಬಿಕೆಯವರ ಮನೆದೇವರು ಅಂದಿನ ಕಪ್ಟಡಿ ಸಂಗಮ(ಇದಿನ ಕೂಡಲ ಸಂಗಮ)ದಲ್ಲಿರುವ  ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿರುವ ಶಿವನ ಸಂಕೇತವಾದ/ಸಂಗಮೇಶ್ವರ ಎಂಬ ಯೋಗಿಯ ಸಂಕೇತವಾದ/ಸಂಗಮೇಶ್ವರ ಯೋಗಿಯ ಗದ್ದುಗೆಯ ಮೇಲೆ ಸ್ಥಾಪಿಸಿದ ಸಂಗಮೇಶ್ವರ ಲಿಂಗ. 

ಕಪ್ಪಡಿ ಸಂಗಮದಲ್ಲಿ ಬ್ರಹ್ಮಪುರಿ ಎನ್ನುವ ಒಂದು ಓಣಿ ಇತ್ತು ಆ ಓಣಿಯಲ್ಲಿ ವಾಸವಿದ್ದ ಶಿವ ಸ್ವಾಮಿಯವರಿಗೆ ಗುರು ಬಸವಣ್ಣನವರ ಅಕ್ಕನಾದ ಅಕ್ಕನಾಗಲಾಂಬಿಕೆಯವರನ್ನು ಮದುವೆ 

ಮಡಿ ಕೊಡಲಾಗಿತ್ತು.

ಈ ಎರಡು ಕಾರಣಗಳಿಂದ ಬಾಲ್ಯದಲ್ಲಿ ಗುರು ಬಸವಣ್ಣನವರು ನಿರಂತರವಾಗಿ ಮೇಲಿಂದ ಮೇಲೆ ಕೂಡಲ ಸಂಗಮಕ್ಕೆ ಹೋಗುವ ಪ್ರಸಂಗ ಒದಗಿ ಬರುತ್ತಿತ್ತು. ಹೀಗಾಗಿ ಸಂಗಮೇಶ್ವರಲಿಂಗದ ಮೇಲೆ ಗುರು ಬಸವಣ್ಣನವರಿಗೆ ಅಪಾರವಾದ ಭಕ್ತಿ ಹುಟ್ಟಿ ಸಂಗಮೇಶ್ವರನನ್ನು ಆರಾಧಿಸ ತೊಡಗಿದರು. 

ಸಂಗಮೇಶ್ವರ ಲಿಂಗವನ್ನು ಆರಾಧಿಸುತ್ತ ಬಾಲ್ಯದಲ್ಲಿಯೇ ವಚನಗಳನ್ನು ಬರೆಯಲು ಆರಂಭಿಸಿದ ಬಾಲಕ ಬಸವಣ್ಣನವರು, ತಮ್ಮ ವಚನಗಳನ್ನು ಕೂಡಲ ಸಂಗಮೇಶ್ವರ ಲಿಂಗದೊಂದಿಗೆ ಮಾಡುವ ಸಂಭಾಷಣೆ ರೂಪದಲ್ಲಿ ಬರೆಯತೊಡಗಿದರು. ಹಾಗೆಯೇ ವಚನಗಳ ಬರವಣಿಗೆ ಮುಂದುವರೆದಂತೆ ತಮ್ಮ ಸುತ್ತುಮುತ್ತಲಿನ ಆಗು ಹೋಗುಗಳನ್ನು ಧಾರ್ಮಿಕ 

ಶಿವನ ಗುಣಗಾನ, ಶಿವನ ವರ್ಣನೆ, ಶಿವನು ಮಾಡುವ ಪವಾಡಗಳ ಬಗ್ಗೆ ವಚನಗಳನ್ನು ಬರೆಯಲಾರಂಭಿಸಿದರು. ವಚನಗಳ ಸಂಖ್ಯೆ ವೃದ್ಧಿಯಾದಂತೆ *ಕೂಡಲಸಂಗಮದೇವಾ ಎನ್ನುವುದು ಅವರ ಭಕ್ತಿಯ ಕುರುಹಾಯಿತು ಮತ್ತು ಬಾಲ್ಯದಲ್ಲಿ ಬರೆಯುತ್ತಿದ್ದ ವಚನಗಳ ವಚನಾಂಕಿತವಾಯಿತು.*

(ಭಾಗ-5ರಲ್ಲಿ ಮುಂದುವರೆಯುವುದು......)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…