ಸಂಪಾದಕರ ನುಡಿ ✍️ ಕುರಿತು ವಿಮರ್ಶೆ
ಮಾಸ: ಏಪ್ರಿಲ್ 2025,
ಪತ್ರಿಕೆ : ಕಲ್ಯಾಣ ಕಿರಣ
ಸಂಪಾದಕರು : ಪೂಜ್ಯ ಮಾತೆ ಗಂಗಾದೇವಿಯವರು
*"ಗುರು ಬಸವ ತಂದೆಯವರ ಆಶೋತ್ತರವನ್ನು ಪೂರೈಸಲೆಂದೆ ಜನ್ಮ ತಳೆದು ಬಸವಾತ್ಮಜೆ ಎಂಬ ನಾಮಾಂಕಿತದಿಂದ ಶೋಭಿತರಾದ ಪರಮಪೂಜ್ಯ ಮಾತಾಜಿಯವರ ಜೀವನ, ಸಾಧನೆ, ಸಂದೇಶಗಳಿಗೆ ಈ ವಚನ ಧ್ವನಿಯಾಗಿರುವುದು ಒಂದು ಸುಕೃತ ವಿಶೇಷ ಅಂದರೆ ತಪ್ಪಲ್ಲ"*
ಪೂಜ್ಯ ಮಾತೆ ಗಂಗಾದೇವಿಯವರೇ ತಾವು ಬರೆದಿರುವ ಈ ಸಾಲುಗಳ ಪ್ರಕಾರ, ಪರಮಪೂಜ್ಯ ಮಾತೆ ಮಹಾದೇವಿಯವರು ಗುರು ಬಸವಣ್ಣನವರ ಆಶೋತ್ತರವನ್ನು ಪೂರೈಸಲೆಂದೇ ಜನ್ಮ ತಳೆದು ಹುಟ್ಟಿ ಬಂದಿದ್ದಾರೆ ಎಂದು ಹೇಳಿದ್ದೀರಿ. ತಮ್ಮ ಪ್ರಕಾರ ಪೂಜ್ಯ ಮಾತೆ ಮಹಾದೇವಿಯವರು ಪ್ರತಿಯೊಂದು ಕಾರ್ಯವು ಕೂಡ *ಗುರುಬಸವಣ್ಣನವರ ಆಶಯದ* ಪ್ರಕಾರ ಮಾಡಿ ಹೋಗಿದ್ದಾರೆ.
ಅಂದಮೇಲೆ ಅವರು ಪ್ರತಿಷ್ಠಾಪನೆ ಮಾಡಿ ಹೋಗಿರುವ "ಲಿಂಗದೇವ ವಚನಾಂಕಿತ" ಕಾರ್ಯವು ಕೂಡ ಗುರುಬಸವಣ್ಣನವರ ಆಶೋತ್ತರವಾಗಿತ್ತು ಎಂಬುದು ತಮ್ಮ ಮಾತಿನ ಪ್ರಕಾರ ಸ್ಪಷ್ಟವಾಗುತ್ತದೆ.
ಹಾಗಾದರೆ ತಮ್ಮ ಮಾತಿನ ಪ್ರಕಾರ ಪೂಜ್ಯ ಮಾತಾಜಿಯವರು ಪ್ರತಿಷ್ಠಾಪನೆ ಮಾಡಿ ಹೋಗಿರುವ (ತಮ್ಮ ಪ್ರಾಣದಂತೆ ಉಳಿಸಿಕೊಂಡು ಬಂದಿದ್ದ) "ಲಿಂಗದೇವ ವಚನಾಂಕಿತ" ಸಂಶೋಧನೆಯನ್ನು ಕೈಬಿಡುವುದು ಗುರು ಬಸವಣ್ಣನವರ ಆಶಯಕ್ಕೆ ವಿರುದ್ಧವಾಗಿ ನಡೆದಂತೆ... ಅದೇ ರೀತಿ ಪೂಜ್ಯ ಮಾತಾಜಿ ಅವರು ಬರೆದು ಹೋಗಿರುವ ಗ್ರಂಥಗಳಲ್ಲಿ ಬದಲಾವಣೆ ಮಾಡಿ ಮುದ್ರಣ ಮಾಡುತ್ತಿರುವುದು ಕೂಡ ಗುರುಬಸವಣ್ಣನವರ ಆಶಯಕ್ಕೆ ವಿರುದ್ಧವಾಗಿ ನಡೆದಂತೆ..
ಮುಂದುವರಿದು ತಮ್ಮ ಈ ಲೇಖನದಲ್ಲಿ ತಾವು ಇನ್ನೊಂದು ಸಾಲು ಬರೆದಿದ್ದೀರಿ. "ಶ್ರೀಗಂಧದ ಮರ ಊರೊಳಗೆ ಇರಲಿ ಅಥವಾ ಕಾಡಿನಲ್ಲಿರಲಿ, ಅದು ಒಂದೇ ರೀತಿಯ ಸುವಾಸನೆಯನ್ನು ಕೊಡುತ್ತದೆ."
ತಮ್ಮ ಈ ಮಾತಿನ ಪ್ರಕಾರ ನಮ್ಮ "ನಿಷ್ಠೆ" (Loyalty) ಮತ್ತು "ಬದ್ಧತೆ"ಯು (Commitment) ಸಮಯ ಮತ್ತು ಪ್ರಸಂಗದ ಪ್ರಕಾರ ಬದಲಾವಣೆ ಆಗಬಾರದು ಎಂಬ ಅರ್ಥವನ್ನು ಕೊಡುತ್ತದೆ. ಅಂದಮೇಲೆ ನಾವು ಪೂಜ್ಯ ಮಾತಾಜಿಯವರು ಇದ್ದಾಗ ಯಾವ ನಡೆ ಮತ್ತು ನಿಲುವು ನಮ್ಮದಾಗಿತ್ತು ಅವರು ಲಿಂಗೈಕ್ಯ ಆದಮೇಲೂ ಕೂಡ ಅದೇ ನಡೆ ಮತ್ತು ನಿಲುವು ನಮ್ಮದಾಗಿರಬೇಕು.
"ನಾವು ಸೂಕ್ತ ಸಮಯ ನೋಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಾರದು,", ಹಾಗೂ ನಮ್ಮ ಗುರುಗಳು (ಪೂಜ್ಯ ಮಾತಾಜಿ ಅವರು) ಮಾಡಿ ಹೋಗಿರುವ ಆದೇಶಗಳನ್ನು ಎಂಥ ಸಮಯದಲ್ಲೂ, ಪ್ರಸಂಗದಲ್ಲೂ ಕೂಡ ಕೈ ಬಿಡದೆ ನಿಷ್ಠೆಯಿಂದ ಮುಂದುವರಿಸಿಕೊಂಡು ಹೋಗಬೇಕು ಎಂಬ ಅರ್ಥವನ್ನು ತಮ್ಮ ಈ ಸಾಲುಗಳಿಂದ ಸ್ಪಷ್ಟವಾಗುತ್ತದೆ.
🙏 ಶರಣು ಶರಣಾರ್ಥಿ 🙏
~ ಸಿದ್ದವೀರ ಸಂಗಮದ, - ರಾಷ್ಟ್ರೀಯ ಬಸವ ದಳ



ಗಂಗಾಮಾತಾಜಿಯವರು ಪೂಜ್ಯ ಮಾತಾಜಿಯವರನ್ನು ತೋರಿಕೆಗಾಗಿ ಹೊಗಳುತ್ತಾರೆ ಗಂಗಾಮಾತಾಜಿಯವರಲ್ಲಿ ಪೂಜ್ಯ ಮಾತಾಜಿಯವರ ಬಗ್ಗೆ ಗೌರವ ಇಲ್ಲವೆನ್ನುವುದು ಅವರ ಕಾರ್ಯಗಳಿಂದ ಸ್ಪಷ್ಟವಾಗಿ ಕಾಣುತ್ತದೆ
ಪ್ರತ್ಯುತ್ತರಅಳಿಸಿಆಸೊತ್ತ್ ಬೇಸತ್ತ ಅಕ್ಕನ ಮನೆಗೆ ಹೋದರೆ ಅಕ್ಕನ ಗಂಡ ಅಕ್ಕಡಿ ಹಾಕಲಿಕ್ಕೆಹಚ್ಚಿದ್ದನಂತೆ ಎಂಬ ಗಾದೆ ಮಾತಿನಂತೆ ಆಗಿದೆ ಇವತ್ತಿನ ಪರಿಸ್ಥಿತಿ ಖಾವಿ ಹಾಕಿಕೊಂಡ ಧರ್ಮ ಪ್ರಸಾರಕರಲ್ಲಿ ಹೊಂದಾಣಿಕೆ ಇಲ್ಲಾ ಇನ್ನೂ ಸಮಾಜಕ್ಕೆ ಏನು ಭೋದನೆ ಮಾಡುತ್ತಾರೆ. ಮಹಾಮನೆ ಅಂದ ಮೇಲೆ ಸಮಸ್ಯೆ ಇರುವುದೇ ದೊಡ್ಡವರು ಹೇಳಿದ ಹಾಗೆ ಇದ್ದರಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಬಹಳ ವರ್ಷಗಳಿಂದ ರಾಷ್ಟ್ರೀಯ ಬಸವದಳದಲ್ಲಿ ಇರುವ ಹಿರಿಯರು ಸರಿಯಾದ ತಿಳಿವಳಿಕೆಯಿಂದ ಸಮತೋಲನ ಕಾಪಾಡಿಕೊಂಡು ಸಂಸ್ಥೆ ಮುಂದುವರಿಸಬೇಕೆ ಹೊರತು ಕೆಡೆಸಬಾರದು.
ಪ್ರತ್ಯುತ್ತರಅಳಿಸಿಪೂಜ್ಯ ಲಿಂಗೈಕ್ಯ ಮಾತಾಜಿವರ ಪೀಠಾರೋಹಣದ ಸಂದೇಶ ಒಮ್ಮೆ ನೆನಪಿಸಿಕೊಳ್ಳೋಣ. ಒಂದು ವೇಳೆ ವ್ಯಕ್ತಿಗೆ ಗೌರವ ಕೊಡದಿದ್ದರು ಪರವಾಗಿಲ್ಲ ಆದರೆ ಪೀಠಕ್ಕೆ ಹಾಗೂ ಪೀಠದ ಮೇಲೆ ಕುಳಿತ ಪೀಠಾದ್ಯಕ್ಷರಿಗೆ ಗೌರವ ಕೊಡಲೇಬೇಕು.ಪೂಜ್ಯ ಮಾತಾಜಿವರ ಸಂದೇಶ ಸದಾಕಾಲವೂ ಸ್ಮರಣೆಯಲ್ಲಿದ್ದರೆ ಸಾಕು.
ಓಂ ಶ್ರೀ ಗುರುಬಸವ ಲಿಂಗಾಯ ನಮಃ
ಪ್ರತ್ಯುತ್ತರಅಳಿಸಿಬರೀ ಟೀಕೆ ಟಿಪ್ಪಣಿಗಳನ್ನು ಮಾಡುವುದೇ ಜೀವನವಾಗಿಬಿಟ್ಟಿದೆ ಈಗಿನ ಕಾಲದಲ್ಲಿ ನನಗೆ ಒಂದು ಅರ್ಥವಾಗುತ್ತದೆ ನಿಮ್ಮಂತವರು ಇರೋವರೆಗೂ ಇದೇ ಪರಿಸ್ಥಿತಿ ಅನಿಸುತ್ತದೆ ಬಸವಧರ್ಮದ ಪೀಠಾಧ್ಯಕ್ಷರಾಗಿ ನಿರ್ಣಯ ತೆಗೆದುಕೊಳ್ಳುವ ಹಕ್ಕನ್ನು ಸಹ ನೀವೇ ತೀರ್ಮಾನಿಸುತ್ತೀರಾ ಪೂಜ್ಯರೊಂದಿಗೆ ಗೌರವದಿಂದ ನಡೆದುಕೊಳ್ಳುವ ಸಂಸ್ಕಾರವನ್ನು ಮೊದಲು ನಾವು ಕಲಿಯಬೇಕು ಒಂದು ಸಂಸ್ಥೆಯನ್ನು ನಡೆಸಬೇಕಾದರೆ ಅಲ್ಲಿರುವ ಗೊಂದಲಗಳು ಅವರಿಗೆ ಮಾತ್ರ ಗೊತ್ತಿರುತ್ತದೆ ಮತ್ತು ಗುರುಗಳ ನಡುವೆ ಯಾವ ಮಾತು ಕಥೆ ನಡೆದಿರುತ್ತದೆ ಎಂದು ನಮಗೆ ನಿಮಗೆ ಗೊತ್ತಿರುವುದಿಲ್ಲ ಪೂಜನೀಯ ಮಾತೆ ಮಹಾದೇವಿ ತಾಯಿಯವರು ಗಂಗಾ ಮಾತಾಜಿಯವರಿಗೆ ಏನು ಹೇಳಿದ್ದಾರೆ ಮತ್ತು ಅವರೊಂದಿಗೆ ಏನು ಚರ್ಚೆ ಮಾಡಿದ್ದಾರೆ ಎಂಬುದನ್ನು ನೀವು ಕಣ್ಣಾರೆ ನೋಡಿದಂತೆ ಕಿವಿಯಾರ ಕೇಳಿದಂತೆ ಘೋಷಿಸಬಾರದು ಶರಣರೆ ಗಂಗಾ ಮಾತಾಜಿಯವರು ಲಿಂಗದೇವ ನಾಮಾಂಕಿತವನ್ನು ತೆಗೆದು ಗಂಗಾ ಮಾತೆ ಇಂದು ತಿದ್ದುಪಡಿ ಮಾಡಿಲ್ಲ ಇದನ್ನು ನೀವು ಅರಿತುಕೊಳ್ಳಬೇಕು ಬಸವಧರ್ಮ ಪೀಠಕ್ಕೆ ಗುರುಗಳನ್ನು ಮಾಡಿದಂತಹ ಮಾತೆ ಮಹಾದೇವಿ ತಾಯಿಯವರಿಗೂ ಬಸವಧರ್ಮ ಪೀಠದಲ್ಲಿ ಈಗಿನ ಗುರುಗಳಾದ ಗಂಗಾ ಮಾತಾಜಿಯವರಿಗೂ ಗೌರವ ಕೊಡುವುದನ್ನು ಮೊದಲು ಕಲಿಯಬೇಕು ಆಗ ಪೂಜ್ಯ ಮಾತೆ ಮಹಾದೇವಿ ತಾಯಿಯವರ ಋಣ ತೀರಿಸಿದಂತೆ ಹಾಗೂ ಅವರಿಗೆ ಗೌರವ ಕೊಟ್ಟಂತೆ
ಲಿಂಗೈಕ್ಯ ಪೂಜ್ಯ ಮಾತೆ ಮಹಾದೇವಿ ತಾಯಿಯವರು ತಮ್ಮ ಧ್ಯೇಯ ಉದ್ಧೇಶ ಸಂಕಲ್ಪಗಳನ್ನು ಬಸವ ಧರ್ಮ ಪೀಠದ ಜಂಗಮರಿಗೊಂದು ಮತ್ತು ಶರಣರಿಗೊಂದು ಬೇರೆ ಬೇರೆ ಹೇಳುತ್ತಿರಲಿಲ್ಲ ಮಾತಾಜಿಯವರು ಏನೇ ಹೇಳಿದರೂ ಶರಣರ ಸಾಕ್ಷಿಯಾಗಿ ಹೇಳುತ್ತಿದ್ದರು
ಪ್ರತ್ಯುತ್ತರಅಳಿಸಿಮಾತಾಜಿಯವರ ವ್ಯಕ್ತಿತ್ವ ತಿಳಿದುಕೊಳ್ಳುವುದು ಎಲ್ಲರಿಗು ಸಾಧ್ಯವಿಲ್ಲ
ಲಿಂಗೈಕ್ಯ ಮಾತೆ ಮಹಾದೇವಿ ತಾಯಿಯವರ ಉದ್ಧೇಶ ಸಂದೇಶ ಸಂಕಲ್ಪ ಸಂಶೋಧನೆಯೇ ನಿಜವಾದ ಬಸವ ಧರ್ಮ ಪೀಠ
ಪ್ರತ್ಯುತ್ತರಅಳಿಸಿಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರ ಅನ್ನುವುದು ಈಗಿನ ಪೀಠಾಧ್ಯಕ್ಷರ ಸ್ಯಯಂ ಘೋಷಣೆ ಲಿಂಗೈಕ್ಯ ಮಾತಾಜಿಯವರಿಗು ಈ ವಾಕ್ಯಕ್ಕೂ ಯಾವುದೇ ಸಂಬಂಧವಿಲ್ಲ
ಪ್ರತ್ಯುತ್ತರಅಳಿಸಿಮಾತೆ ಮಹಾದೇವಿ ತಾಯಿಯವರು ಯಾರಿಗೆ ಲಿಂಗದೇವ ಪದ ಒಪ್ಪಿಗೆ ಇದ್ದರೆ ಅನ್ನಿ ಒಪ್ಪಿಗೆ ಇಲ್ಲದವರು ಕೂಡಲಸಂಗಮದೇವ ಅನ್ನಿ ಎಂದು ಹೇಳಿದ್ದಾರೆ ಆದ್ದರಿಂದ ಇದನ್ನು ಹಿಂಪಡೆಯುವ ಸಂಬಂಧವಾಗಲಿ ಅಧಿಕಾರವಾಗಲಿ ಬೇರೆಯವರಿಗೆ ಮಾತಾಜಿಯವರು ಕೊಟ್ಟಿಲ್ಲ